‘ಆಜಾದಿ ಕಾ ಅಮೃತ ಮಹೋತ್ಸವ’ ಸಂಭ್ರಮವನ್ನು ದೇಶದೆಲ್ಲೆಡೆ ಆ.1ರಿಂದಲೇ ಸಂಭ್ರಮಿಸುತ್ತಿದ್ದು, ಅದೇ ರೀತಿ ಗುರುರಾಜ್ ರವರ ಮಾಲಕತ್ವದ ವಿಟ್ಲ ನೀರಕಣಿಯಲ್ಲಿರುವ ಜೆ.ಎಲ್. ಆಡಿಟೋರಿಯಂ ಹಾಲ್ ಕೇಸರಿ, ಬಿಳಿ, ಹಸಿರು ವರ್ಣಗಳ ಬೆಳಕು ಕಂಗೊಳಿಸುತ್ತಿರುವುದು ‘ಅಜಾದಿ ಕಾ ಅಮೃತ ಮಹೋತ್ಸವ’ ಸಂಭ್ರಮವನ್ನು ವಿಟ್ಲದಲ್ಲಿಯೂ ಸಂಭ್ರಮಿಸುತ್ತಿರುವ ಸೂಚಕವಾಗಿದೆ.

ರಾಷ್ಟ್ರಧ್ವಜದ ಬಣ್ಣದ ಮೂಲಕ ಕಂಗೊಳಿಸುತ್ತಿರುವ ಜೆ.ಎಲ್. ಆಡಿಟೋರಿಯಂ ಅನ್ನು ಜನ ಕಣ್ತುಂಬಿಕೊಳ್ಳುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯವು ವೈರಲ್ ಆಗುತ್ತಿದೆ. ‘ರಾಷ್ಟ್ರ ಧ್ವಜ’ದ ಬಣ್ಣದಲ್ಲಿ ಕಂಗೊಳಿಸುತ್ತಿರುವ ಆಡಿಟೋರಿಯಂ ನ ಚಿತ್ರವನ್ನು ತಮ್ಮ ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.




























