ಪುತ್ತೂರು: ಸುಮಾರು 14 ವರ್ಷಗಳ ಹಿಂದೆ ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ನಡೆದ ಕಾಮಗಾರಿ ಕೆಲಸಗಳ ಬಾಕಿ ಮೊತ್ತ 71,250 ರೂ. ಅನ್ನು ನೀಡದೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ ಮತ್ತು ಕಾರ್ಯದರ್ಶಿ ಜನಾರ್ಧನ ಜೋಯಿಸ ರವರ ವಿರುದ್ಧ ಜನಾರ್ಧನ ಬೆಳ್ಚಾಡ ಎಂಬವರು ದೇವಸ್ಥಾನದ ಆವರಣದಲ್ಲಿ ನಡೆಸುತ್ತಿದ್ದ ‘ಉಪವಾಸ ಸತ್ಯಾಗ್ರಹ’ ಇಂದು ಮುಂದುವರೆದಿದೆ.

ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಜೀರ್ಣೊದ್ಧಾರದ ಸಂದರ್ಭದಲ್ಲಿ ಗಾರೆ ಕೆಲಸಗಳನ್ನು ಮಾಡಿದ್ದು, ಸದ್ರಿ ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಲೋಕಪ್ಪ ಗೌಡ ರವರ ನಿರ್ದೇಶನದಂತೆ ದೇವಸ್ಥಾನದ ಸಂಪೂರ್ಣ ಕೆಲಸ ಕಾರ್ಯಕ್ರಮಗಳನ್ನು ಕ್ಲಪ್ತ ಸಮಯದಲ್ಲಿ ನಿರ್ವಹಿಸಿರುತ್ತೇನೆ. ಸದ್ರಿ ಕಾಮಗಾರಿ ನಿರ್ವಹಿಸಿದ ಬಗ್ಗೆ 71,250 ರೂ. ಬಾಕಿ ಉಳಿಸಿದ್ದು, ಅಷ್ಟಮಂಗಲ ಪ್ರಶ್ನೆಯ ಸಂದರ್ಭದಲ್ಲಿ ದೈವಜ್ಞರು, ತಂತ್ರಿಗಳು ಊರಿನ ಭಕ್ತರ ಉಪಸ್ಥಿತಿಯಲ್ಲಿ ತಕ್ಷಣ ನೀಡುತ್ತೇನೆಂದು ಒಪ್ಪಿಕೊಂಡಿದ್ದು, ಆದರೇ ಈ ತನಕ ಹಣ ನೀಡಿರುವುದಿಲ್ಲ., ಹಲವಾರು ಬಾರಿ ಪರಿಪರಿಯಾಗಿ ವಿನಂತಿಸಿದರೂ ಲೋಕಪ್ಪ ಗೌಡ ಮತ್ತು ಜನಾರ್ಧನ ಜೋಯಿಸರು ಉಡಾಫೆ ಉತ್ತರ ನೀಡಿದ್ದು, ಇದರಿಂದಾಗಿ ಬೇಸತ್ತು, ಆ.11 ರಿಂದ ಜನಾರ್ಧನ್ ರವರು ಉಪವಾಸ ಸತ್ಯಗ್ರಹವನ್ನು ದೇವಳದ ವಠಾರದಲ್ಲಿ ನಿರ್ವಹಿಸುತ್ತಿದ್ದು,
ನ್ಯಾಯ ಒದಗಿಸಿ ಕೊಡುವಂತೆ ಸಂಬಂಧಪಟ್ಟ ಇಲಾಖೆ ಮತ್ತು ಊರಿನ ಭಕ್ತರಲ್ಲಿ ಅವರು ವಿನಂತಿಸಿದ್ದಾರೆ.
2008 ರಲ್ಲಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆದಿದ್ದು, ಈ ವೇಳೆ ಗಾರೆ ಕೆಲಸ ನಿರ್ವಹಿಸಿದ ಜನಾರ್ಧನ್ ರವರಿಗೆ ಕೆಲಸದ ಅರ್ಧ ಮೊತ್ತವನ್ನು ನೀಡಿದ್ದು, ನಂತರದ ಮೊತ್ತವನ್ನು ಮತ್ತೆ ನೀಡುವುದಾಗಿ ತಿಳಿಸಿದ್ದು, ಆದರೇ ಈವರೆಗೂ ಬಾಕಿ ಉಳಿದ ಮೊತ್ತವನ್ನಿ ನೀಡಿದೆ ಇದ್ದು, ಈ ಬಗ್ಗೆ ಕೆಲ ದಿನಗಳ ಹಿಂದೆ ನಡೆದ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕೆಲಸಕ್ಕೆ ಬಂದವರಿಗೆ ಸರಿಯಾದ ಹಣ ಪಾವತಿ ಮಾಡದ ಕಾರಣ ಅವರ ಶಾಪಕ್ಕೆ ಗುರಿಯಾಗಿದ್ದು, ಈ ಹಿನ್ನೆಲೆ ಅವರ ಹಣ ನೀಡುವಂತೆ ಹೇಳಾಗಿದ್ದು, ಈ ಬಗ್ಗೆ ಹಣ ಕೊಡುವುದಾಗಿ ದೈವಜ್ಞರು, ತಂತ್ರಿಗಳು ಊರಿನ ಭಕ್ತರ ಉಪಸ್ಥಿತಿಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಲೋಕಪ್ಪ ಗೌಡ ರವರು ಕೊಡುವುದಾಗಿ ಒಪ್ಪಿಕೊಂಡಿದ್ದು, ನಂತರ ಚೆಕ್ ನೀಡುವುದಾಗಿ ಹೇಳಿ ಕೊಡದೆ ಸತಾಯಿಸಿರುವುದಾಗಿ ಆರೋಪ ಕೇಳಿ ಬಂದಿದೆ.
ಜನಾರ್ಧನ್ ರವರು ಸತ್ಯಾಗ್ರಹ ನಡೆಸುತ್ತಿರುವಲ್ಲಿಗೆ ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುಷ್ಪ ರವರು ಭೇಟಿ ನೀಡಿದ್ದು, ಈ ವೇಳೆ ಜನಾರ್ಧನ್ ರವರು ತಮ್ಮ ಮನವಿಯನ್ನು ಪಂಚಾಯತ್ ಅಧ್ಯಕ್ಷರಿಗೆ ಸಲ್ಲಿಸಿದರು.
ಪಂಚಾಯತ್ ಸದಸ್ಯರಾದ ಅಶೋಕ್ ಪುತ್ತಿಲ, ಬಾಲಕೃಷ್ಣ ಪೂಜಾರಿ, ಅರುಣ್ ಕಣ್ಣರ್ನೂಜಿ, ಮಾಜಿ ಅಧ್ಯಕ್ಷ ಮಹೇಶ್ ಚಂದ್ರ ಸಾಲಿಯಾನ್, ಮಾಜಿ ಸದಸ್ಯ ಸೀತಾರಾಮ ಗೌಡ, ಸುಂದರ ಗೌಡ ನಡುಬೈಲು, ಬಾಲಚಂದ್ರ ಗೌಡ, ನಾರಾಯಣ ನಾಯ್ಕ್, ಅರುಣ್ ಪುತ್ತಿಲ, ಅನಿಲ್ ಕಣ್ಣರ್ನೋಜಿ, ಶ್ರೀಧರ್ ನಾಯ್ಕ್, ಪುರಂದರ ಗೌಡ, ಪ್ರತೀಕ್, ಧನಂಜಯ ನಾಯ್ಕ್, ಪ್ರಸಾದ್ ಬಿಕೆ, ಹರೀಶ್ ನಾಯ್ಕ್, ಸೇರಿದಂತೆ ಹಲವಾರು ಭಕ್ತಾಧಿಗಳು ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದರು.



























