ಉಪ್ಪಿನಂಗಡಿ: ಸಮೀಪದ ಕರಾಯ ಗ್ರಾಮದ ಕಲ್ಲೇರಿ ಎಂಬಲ್ಲಿ ಆ.11 ರಂದು ರಾತ್ರಿ ನಡೆದಿದ್ದ ಕಳವು ಹಾಗೂ ಕಳ್ಳತನ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರ ಕಾರ್ಯಾಚರಣೆ ನಡೆಸಿದ
ಉಪ್ಪಿನಂಗಡಿ ಠಾಣಾ ಉಪನಿರೀಕ್ಷಕ ರಾಜೇಶ್ ಕೆ.ವಿ. ನೇತೃತ್ವದ
ಪೊಲೀಸರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಲ್ಲೇರಿಯ ಮೆಡಿಕಲ್ ಶಾಪ್‌ನ ಮತ್ತೊಂದು ಕೊಠಡಿಯಲ್ಲಿದ್ದ
ಕ್ಲಿನಿಕ್‌ನಲ್ಲಿ ಕಳವು ಮಾಡಿ, ಮೂರ್ತೆದಾರರ ಸಹಕಾರಿ ಸಂಘದ
ಬಾಗಿಲು ಮುರಿಯಲು ಯತ್ನಿಸಿದ ಘಟನೆ ಆ.12 ರಂದು
ಬೆಳಕಿಗೆ ಬಂದಿತ್ತು.
ಈ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ ಕಾರ್ಯಪ್ರವೃತ್ತರಾದ ಎಸ್. ಐ ಮತ್ತು ಅವರ ತಂಡ ಮಾಹಿತಿಯನ್ನು ಕಲೆ ಹಾಕಿ ಪರಾರಿಯಾಗಿದ್ದ ಕಳ್ಳನ ಜಾಡು ಹಿಡಿದು ಆರೋಪಿಯನ್ನು ಬಂಧಿಸಿದ್ದಾರೆ.
ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಶಾಂತಿಬೆಟ್ಟು ಮನೆ ನಿವಾಸಿ ಅಬ್ದುಲ್ ಖಾದರ್ ಎಂಬವರ ಪುತ್ರ ಅಶ್ರಫ್ (37) ಬಂಧಿತ ಆರೋಪಿ.

ಅಶ್ರಫ್ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನದ ಪ್ರಕರಣದಲ್ಲೂಆರೋಪಿಯಾಗಿದ್ದಾನೆ ಎಂದು ತಿಳಿದು ಬಂದಿದೆ
.




























