ಬೆಂಗಳೂರು: ಹೆಚ್.ಬಿ.ಆರ್ ಲೇಔಟ್ನಲ್ಲಿ ನಿನ್ನೆ ಧ್ವಜ ಕಟ್ಟುವಾಗ ಬಿದ್ದು ಗಾಯಗೊಂಡಿದ್ದ ವ್ಯಕ್ತಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಸುಳ್ಯ ಮೂಲದ ವಿಶುಕುಮಾರ್ (33) ಮೃತ ದುರ್ದೈವಿ.
ವಿಶುಕುಮಾರ್ ನಿನ್ನೆ ಟೆರಸ್ ಮೇಲೆ ಧ್ವಜ ಕಟ್ಟುತ್ತಿದ್ದಾಗ ಬಿದ್ದಿದ್ದು, ಆತನನ್ನು ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ವಿಶುಕುಮಾರ್ ನಿನ್ನೆ ಮಧ್ಯಾಹ್ನ ಮನೆಯ ಮೇಲೆ ರಾಷ್ಟ್ರಧ್ವಜ ಕಟ್ಟಲು ಹೋಗಿದ್ದಾಗ ಎರಡನೇ ಮಹಡಿಯಿಂದ ಬಿದ್ದಿದ್ದರು.
ಆಯತಪ್ಪಿ 30 ಅಡಿ ಮೇಲಿಂದ ಕೆಳಗೆ ಬಿದ್ದಿದ್ದ ವಿಶುಕುಮಾರ್ ತಲೆಗೆ ಗಂಭೀರ ಗಾಯಗಳಾಗಿದ್ದವು. ತಕ್ಷಣ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ವಿಶುಕುಮಾರ್ ಕೊನೆಯುಸಿರೆಳೆದ್ದಾರೆ. ಘಟನೆ ಸಂಬಂಧ ವಿಶುಕುಮಾರ್ ತಂದೆ ನಾರಾಯಣ ಭಟ್ ಅವರು ದೂರು ನೀಡಿದ್ದು, ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.




























