ಪುತ್ತೂರು: ನರಿಮೊಗರಿನ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಲುವಾಗಿ ಆಜಾದಿ ಅಮೃತ ಮಹೋತ್ಸವವನ್ನು ಆಚರಿಸಲಾಯಿತು.

ಶಾಲಾ ಅಧ್ಯಕ್ಷರಾದ ಜಯರಾಮ ಕೆದಿಲಾಯ .ಎಸ್ ರವರು ಧ್ವಜಾರೋಹಣ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿದ್ಯಾರ್ಥಿಗಳು ವಂದೇ ಮಾತರಂ ಹಾಗೂ ದೇಶಭಕ್ತಿ ಗೀತೆ ಹಾಗೂ ರಾಷ್ಟ್ರಗೀತೆಯನ್ನು ಹಾಡಿದರು.

ಸಭಾ ಕಾರ್ಯಕ್ರಮ:
ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಮಾಜಿ ಯೋಧ ಹಾಗೂ ಶಾಲೆಯ ಪೋಷಕರಾದ ಶಿವಾನಂದ .ಬಿ ಮಾತನಾಡುತ್ತಾ ಒಬ್ಬ ಒಳ್ಳೆಯ ಯೋಧನಾಗಬೇಕಾದರೆ ಅವನಲ್ಲಿ ಸಮಯ ಪಾಲನೆ, ಶಿಸ್ತು, ದೇಶ ಭಕ್ತಿ ಇದ್ದಾಗ ಮಾತ್ರ ಸಾಧ್ಯ ಎಂದು ತಿಳಿಸಿ ಶುಭ ಹಾರೈಸಿದರು.
ಸಭಾ ಕಾರ್ಯಕ್ರಮದಲ್ಲಿ ಇನ್ನೋರ್ವ ಮಾಜಿ ಯೋಧ ರಮೇಶ್ ರೈ , ಶಾಲಾ ಸಂಚಾಲಕರಾದ ಭಾಸ್ಕರ ಆಚಾರ್, ಕಾರ್ಯದರ್ಶಿಗಳಾದ ಕೃಷ್ಣ ಪ್ರಸಾದ್ ಕೆದಿಲಾಯ, ಸದಸ್ಯರಾದ ಹರೀಶ್ ಪುತ್ತೂರಾಯರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಅಧ್ಯಕ್ಷರಾದ ಜಯರಾಮ ಕೆದಿಲಾಯ ಮಾತನಾಡುತ್ತಾ, ಪ್ರತೀ ಮನೆಯಲ್ಲಿ ರಾಷ್ಟç ಧ್ವಜವನ್ನು ಹಾರಿಸುವ ಅವಕಾಶ ಸಿಕ್ಕಿದ್ದು ಒಂದು ಸದಾವಕಾಶ. ಅಗ್ನಿಪಥ್ ಮೂಲಕ ಯುವ ಜನಾಂಗ ತನ್ನನ್ನು ತೊಡಗಿಸಿಕೊಂಡಾಗ ದೇಶ ಇನ್ನಷ್ಟು ಬಲಿಷ್ಠವಾಗಲು ಸಾಧ್ಯ ಎಂದು ತಿಳಿಸುತ್ತಾ ಶುಭ ಕೋರಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಜಯಮಾಲ .ವಿ.ಎನ್ ಪ್ರಾಸ್ತವಿಕ ಮಾತುಗಳೊಂದಿಗೆ ಸ್ವಾಗತಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಸೌಮ್ಯ .ಎ.ಎಂ ಮಾಡಿದರು. ದೇವಕಿ .ಎಂ ಧನ್ಯವಾದ ಸಲ್ಲಿಸಿದರು.
ಮಾಜಿ ಯೋಧರಿಗೆ ಅಭಿನಂದನೆ
ಈ ಸಂದರ್ಭದಲ್ಲಿ ಮಾಜಿ ಯೋಧರು ಮತ್ತು ಶಾಲೆಯ ಪೋಷಕರಾದ ಶಿವಾನಂದ .ಬಿ-ನರಿಮೊಗರು ಮತ್ತು ರಮೇಶ್ ರೈ-ತಿಂಗಳಾಡಿ ರವರನ್ನು ಶಾಲಾ ಅಧ್ಯಕ್ಷರು ಸನ್ಮಾನಿಸಿ ಅಭಿನಂದಿಸಿದರು.
ಮೆರವಣಿಗೆ:
ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವಕ್ಕೆ ಮೆರುಗು ನೀಡುವಲ್ಲಿ ಶಾಲಾ ಆಡಳಿತಮಂಡಳಿಯವರು, ಶಿಕ್ಷಕ-ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು, ಪೋಷಕರೊಂದಿಗೆ ಸೇರಿ ನಡೆಸಿದ ಮೆರವಣಿಗೆ ಸಾಕ್ಷಿಯಾಯಿತು. ಒಟ್ಟು 1200 ವಿದ್ಯಾರ್ಥಿಗಳು ಎರಡು ತಂಡಗಳಾಗಿ ಪುರುಷರಕಟ್ಟೆ ಹಾಗೂ ನರಿಮೊಗರು ದಾರಿಯಾಗಿ ಮೆರವಣಿಗೆಯಲ್ಲಿ ಸಾಗಿದರು. ದಾರಿಯುದ್ದಕ್ಕೂ ಭಾರತ ಮಾತೆಗೆ ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಜಯಘೋಷಗಳನ್ನು ಹಾಕಿದರು. ದಾರಿಯುದ್ದಕ್ಕೂ ಸಿಹಿತಿಂಡಿ ಹಾಗೂ ತಂಪು ಪಾನೀಯಗಳನ್ನು ಅರುಣ್ ಕುಮಾರ್ ಪುತ್ತಿಲ, ಅಶೋಕ್ ಕುಮಾರ್ ಪುತ್ತಿಲ ಮತ್ತು ಬಳಗದವರು, ಕೃಷ್ಣರಾಜ್ ಜೈನ್ ಮತ್ತು ಮನೆಯವರು, ಶಿವಾನಂದ ಮತ್ತು ಮನೆಯವರು, ನರಿಮೊಗರು ಕೃಷಿಪತ್ತಿನ ಸಹಕಾರಿ ಸಂಘದವರು, ಪುರುಷರ ಕಟ್ಟೆ ಆಟೋ ಚಾಲಕರು ಹಾಗೂ ಉದಯ ಭಾಗ್ಯ ಹೋಟೇಲ್ ಮತ್ತು ಸ್ಟೋರ್ಸ್ ನವರು ಮತ್ತು ಸರೋವರ ಬಾರ್ ನ ಮಾಲೀಕರಾದ ಜಯರಾಮ್ ರವರು ನೀಡಿ ಸಹಕರಿಸಿದರು. ಮಧ್ಯಾಹ್ನದ ಉಪಾಹಾರಕ್ಕೆ ಪಾನೀಯ ವ್ಯವಸ್ಥೆಯನ್ನು ಸುರೇಶ್ ಪ್ರಭು ಶೆಟ್ಟಿಮಜಲು ನೀಡಿ ಸಹಕರಿಸಿದರು.

























