ಉಪ್ಪಿನಂಗಡಿ: ಜೈಲಿನಿಂದ ಬಿಡುಗಡೆಯಾದ ವ್ಯಕ್ತಿಯೊಬ್ಬ ಮಹಿಳೆಯೊಬ್ಬರ ಬೈಕ್ ಕದ್ದು ಸಾರ್ವಜನಿಕರೇ ಪತ್ತೆ ಹಚ್ಚಿ ಪೋಲಿಸರಿಗೆ ಒಪ್ಪಿಸಿದ ಘಟನೆ ಗುಂಡ್ಯದಲ್ಲಿ ನಡೆದಿದೆ.
ಆರೋಪಿಯನ್ನು ಉಪ್ಪಿನಂಗಡಿ ಪೋಲಿಸರ ವಶಕ್ಕೆ ಒಪ್ಪಿಸಲಾಗಿದ್ದು, ಎಂಜಿರದ ಮಹಿಳೆಯೊಬ್ಬರ ಬೈಕ್ ಕದ್ದು ಪರಾರಿಯಾಗುತ್ತಿದ್ದ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ ಎನ್ನಲಾಗಿದೆ.

ಎಂಜಿರ ಪ್ರದೇಶವು ಧರ್ಮಸ್ಥಳ ಪೋಲಿಸ್ ಠಾಣಾ ವ್ಯಾಪ್ತಿಗೆ ಒಳಪಡುವುದರಿಂದ ಆರೋಪಿಯನ್ನು ಧರ್ಮಸ್ಥಳ ಪೋಲಿಸ್ ಠಾಣೆಗೆ ಉಪ್ಪಿನಂಗಡಿ ಪೋಲಿಸರು ಕರೆದೊಯ್ಯಿದಿದ್ದಾರೆ.
ಆರೋಪಿ ಕಣ್ಣೂರು ಜೈಲಿನಿಂದ ನಿನ್ನೆಯಷ್ಟೇ ಬಿಡುಗಡೆಯಾಗಿದ್ದ ಎನ್ನಲಾಗುತ್ತಿದ್ದು, ಆತ ಕ್ಷಣಕ್ಕೊಂದು ಹೆಸರು ಹೇಳುತ್ತಿದ್ದರಿಂದ ಆತನ ಮೂಲ ಹೆಸರು ತಿಳಿದುಬಂದಿಲ್ಲ..

























