ಪುತ್ತೂರು: ರೋಟರಿಪುರ ಅಂಗನವಾಡಿ ಕೇಂದ್ರದಲ್ಲಿ ’75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ’ ಕಾರ್ಯಕ್ರಮ ನಡೆಯಿತು.
ನಗರ ಸಭಾ ಸದಸ್ಯರಾದ ರೋಹಿಣಿ ರವರು ಧ್ವಜಾರೋಹಣ ನೆರವೇರಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಆನಂದ್ ರವರು ಸ್ವಾತಂತ್ರೋತ್ಸವದ ಬಗ್ಗೆ ಮಾತನಾಡಿ, ಶುಭ ಹಾರೈಸಿದರು. ಅಂಗನವಾಡಿ ಪುಟಾಣಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಗೀತಾ ಚಂದ್ರಶೇಖರ್ ಹಾಗೂ ಸದಸ್ಯರು, ಸ್ತ್ರೀಶಕ್ತಿ ಸಂಘದ ಅಧ್ಯಕ್ಷೆ ಹಾಗೂ ಸದಸ್ಯರು, ಪ್ರಗತಿ ಯುವಕ ಮಂಡಲದ ಅಧ್ಯಕ್ಷರು ಹಾಗೂ ಸದಸ್ಯರು, ಮಕ್ಕಳ ಪೋಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶುಭ ಪ್ರಾರ್ಥಿಸಿ, ಪ್ರೇಮಾ ರವರು ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಗೌರಿ ದಯಾನಂದ್ ಧನ್ಯವಾದಗೈದರು. ಅಂಗನವಾಡಿ ಸಹಾಯಕಿ ಗೀತಾ ಸಹಕರಿಸಿದರು.

























