ಪುತ್ತೂರು: ಸಾರ್ವಜನಿಕ ಸನ್ಮಾನ ಹಾಗೂ ವಿದಾಯ ಸಮಾರಂಭ ಆನಂದಆಶ್ರಮ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.

ಕಳೆದ 22 ವರ್ಷಗಳಿಂದ ಆನಂದಆಶ್ರಮ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಉಮಾವತಿಯವರಿಗೆ ಆ.14 ರಂದು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಲವು ಮಂದಿ ಅತಿಥಿಗಳು ತನ್ನ ಜೀವನದಲ್ಲಿ ಎಷ್ಟೇ ಕಷ್ಟ ಇದ್ದರು ಅದಕ್ಕೆ ತೋರಿಸಿಕೊಳ್ಳದೆ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಎಂದು ಅಂಗನವಾಡಿ ಸಹಾಯಕಿ ಉಮಾವತಿಯವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಾಲವಿಕಾಸ ಸಮಿತಿ ಅಧ್ಯಕ್ಷೆ ಉಷಾ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಾಜಿ ನಗರಸಭಾ ಸದಸ್ಯರಾದ ರಮೇಶ್ ರೈ, ಮಾಜಿ ಪಂಚಾಯತ್ ಸದಸ್ಯರಾದ ಜಬ್ಬರ್ ಸಂಪ್ಯ, ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಉಷಾ, ಆರ್ಯಾಪು ಗ್ರಾಮದ 30ನೇ ವಾರ್ಡಿನ 114ರ ಬೂತ್ ಕಾರ್ಯದರ್ಶಿ ಮೋಹನ್ ಸಿಂಹವನ , ರೋಟರಿಪುರ ಅಂಗನವಾಡಿ ಕಾರ್ಯಕರ್ತೆ ಜಯಶ್ರೀ, ಮಕ್ಕಳ ಪೋಷಕರಾದ ಮೋಹನ್ ಭಟ್ ಪಂಜಳ, ಹಿರಿಯ ವಿದ್ಯಾರ್ಥಿ ಲಿರಿಶ್ಯಾ ಡಿಸೋಜ ಇವರ ಉಪಸ್ಥಿತಿಯಲ್ಲಿ ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಉಮಾವತಿಯವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಅಂಗನವಾಡಿ ಸಹಾಯಕಿ ಉಮಾವತಿಯವರು ಮಾತನಾಡಿ, ತನ್ನ 22 ವರ್ಷದ ಸೇವಾ ಅವಧಿಯ ಅನುಭವಗಳನ್ನು ಹಂಚಿಕೊಂಡರು ಈ ಅವಧಿಯಲ್ಲಿ ಸಹಕರಿಸಿದವರಿಗೆ ಧನ್ಯವಾದಗಳು ತಿಳಿಸಿದರು.
ಅಂಗನವಾಡಿಯ ನೂತನ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿರುವ ನಳಿಯವರನ್ನು ಅಂಗನವಾಡಿ ಕಾರ್ಯಕರ್ತೆ ಲಲಿತಾ ಇವರು ಹೂ ನೀಡಿ ಸ್ವಾಗತಿಸಿದರು.
ಕಾರ್ಯಕ್ರಮದ ಸ್ವಾಗತ ಮತ್ತು ನಿರೂಪಣೆಯನ್ನು ಅಂಗನವಾಡಿ ಕಾರ್ಯಕರ್ತೆ ಲಲಿತ ರವರು ನೆರವೇರಿಸಿದರು. ಉಮಾವತಿಯವರ ಸನ್ಮಾನ ಪತ್ರ ಮತ್ತು ಧನ್ಯವಾದವನ್ನು ಹಳೆ ವಿದ್ಯಾರ್ಥಿಗಳು ನೆರವೇರಿಸಿದರು.


























