ವಿಟ್ಲ: ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು ಇದರ ವತಿಯಿಂದ ವಿಟ್ಲ ಪಡಾರಬೆಟ್ಟುವಿನ ಬಹುಮುಖ ಪ್ರತಿಭೆ ನಿರೀಕ್ಷಾ ಶೆಟ್ಟಿ ರವರನ್ನು ಅವರ ಮನೆಯಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ರವರು ನಿರೀಕ್ಷಾ ಶೆಟ್ಟಿ ರನ್ನು ಸನ್ಮಾನಿಸಿ ಶುಭ ಹಾರೈಸಿದರು.

ಅತಿಥಿಗಳಾಗಿ ಸಮಾಜ ಸೇವಕಿ ಸೀತಾ ಭಟ್ ಪಾಣಾಜೆ, ಚಲನಚಿತ್ರ ನಟ ಸಂತೋಷ್ ಜೆಪಿ ಮುರ, ಗೋಪಾಲ ಶೆಟ್ಟಿ, ಬಬಿತ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ವಾಹಕ ನವೀನ್ ಪುತ್ತೂರು ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಸ್ನೇಹ ಸಿಲ್ಕ್ ಅಂಡ್ ರೆಡಿಮೇಡ್ ನ ಉದ್ಯೋಗಿ, ಶ್ರೀ ಕೃಷ್ಣ ಯುವಕ ಮಂಡಲ ರಿ. ಸಿಟಿಗುಡ್ಡೆ ಇದರ ಅಧ್ಯಕ್ಷರಾದ ಬಿ ರಾಜೀವ ಗೌಡ ರವರು ಸನ್ಮಾನ ಪತ್ರವನ್ನು ಓದಿದರು., ಕಲಾವಿದ ಕೃಷ್ಣಪ್ಪ ಕಾರ್ಯಕ್ರಮ ನಿರೂಪಿಸಿದರು.


























