ಪುತ್ತೂರು: ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆ.17 ರಂದು ರೋಟರಿಪುರದಲ್ಲಿ ನಡೆದಿದೆ.
ಮೃತರನ್ನು ರೋಟರಿಪುರ ನಿವಾಸಿ ಜಗದೀಶ್ ಭಟ್ (42) ಎಂದು ಗುರುತಿಸಲಾಗಿದೆ.

ಅವಿವಾಹಿತರಾಗಿದ್ದ ಜಗದೀಶ್ ರವರು ಅನಾರೋಗ್ಯದಿಂದಿದ್ದು, ಮನೆಯಲ್ಲಿ ಒಬ್ಬರೇ ಇದ್ದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.
ಮೃತರು ಓರ್ವ ಸಹೋದರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

























