ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ‘ಗೋಕುಲ ಬಾಲಕನೇ ಕೃಷ್ಣ’ ಸ್ಯಾಕ್ಸೋಫೋನ್ ವರ್ಷನ್ ಹಾಡು ಶ್ರೀ ವಿ ಕ್ರಿಯೇಷನ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿದೆ.
ಹಾಡಿನಲ್ಲಿ ಸ್ಯಾಕ್ಸೋಫೋನ್ ಕಲಾವಿದರಾಗಿ ಎಂ. ವೇಣುಗೋಪಾಲ್ ಪುತ್ತೂರು ಕಾಣಿಸಿಕೊಂಡಿದ್ದು, ಹಿನ್ನೆಲೆ ಗಾಯನ ಕೃತಿಕಾ ಅಖಿಲ್ ರವರು ಮಾಡಿದ್ದಾರೆ.
ಭರತನಾಟ್ಯ ಕಲಾವಿದೆಯರಾಗಿ ರಾಧಾ ಪಾತ್ರದಲ್ಲಿ ವಿದುಷಿ ಸಹನ ರೈ ಕುಂದಾಪುರ ಹಾಗೂ ಕೃಷ್ಣ ಪಾತ್ರದಲ್ಲಿ ವಿದುಷಿ ರಾಜೇಶ್ವರಿ ಪ್ರಭು ರವರು ಅಭಿನಯಿಸಿದ್ದಾರೆ.

ರೆಕಾರ್ಡಿಂಗ್ ಮತ್ತು ಮಾಸ್ಟರಿಂಗ್ -ಶಿನೋಯ್ ವಿ ಜೋಸೆಫ್ (Cad Media Mangalore), ಛಾಯಾಗ್ರಹಣ – ಸಂದೇಶ್, ಜಿತೇಶ್, ಸನತ್, ಸಂಕಲನ – ವಿಕ್ರಮ್ ನಾಯಕ್ (Shree V Creation), ಪ್ರಚಾರ ಕಲೆ – ಶಶಿ ಆಚಾರ್ ಕನ್ಯಾನ ( Pajje Designz) ರವರು ನಿರ್ವಹಿಸಿದ್ದಾರೆ.