ವಿಟ್ಲ: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿಟ್ಲ ಪಾಂಡುರಂಗ ದೇವಸ್ಥಾನದಲ್ಲಿ ಆ.18 ರಂದು ಭಜನಾ ಕೀರ್ತನಾ ಕಾರ್ಯಕ್ರಮ ಮತ್ತು ಗುರುವಂದನಾ ಕಾರ್ಯಕ್ರಮ ನಡೆಯಿತು.

ಭಜನಾ ಕೀರ್ತನಾ ಕಾರ್ಯಕ್ರಮವನ್ನು ರಾಮಕೃಷ್ಣ ಕಾಟುಕುಕ್ಕೆ ರವರ ನೇತೃತ್ವದ ಪಂಚಲಿಂಗೇಶ್ವರ ತಂಡ ಮತ್ತು ಗಣರಾಜ್ ಭಟ್ ಮಂಗಳೂರು ರವರ ನೇತೃತ್ವದ ನಾದಬ್ರಹ್ಮ ಭಜನಾ ಮಂಡಳಿ ತಂಡ ವಿಟ್ಲ ನಡೆಸಿಕೊಟ್ಟರು.
ಗಣರಾಜ್ ಭಟ್ ಮತ್ತು ರಾಮಕೃಷ್ಣ ಕಾಟುಕುಕ್ಕೆ ರವರಿಗೆ ಗುರು ವಂದನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ವೇಳೆ ಭಜನಾ ತರಗತಿಯ ಹಾಗೂ ಸಂಗೀತ ತರಗತಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
