ಮಂಗಳೂರು: ಯುವಕನನ್ನುತಂಡವೊಂದು ಮಾರಕಾಸ್ತ್ರದಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ವಲಚ್ವಿಲ್ ಬಳಿ ನಡೆದಿದೆ.
ಶುಕ್ರವಾರ ರಾತ್ರಿ ಅಂಗಡಿಗೆ ದಿನಸಿ ತರಲು ತೆರಳಿದ್ದ ಮಿಫ್ತಾಹ್ ಎಂಬ ಬಾಲಕನ ಮೇಲೆ ಹಲ್ಲೆಗೆ ಗಾಂಜಾ ಗ್ಯಾಂಗ್ ಮುಂದಾಗಿದ್ದು, ಇದನ್ನು ತಡೆಯಲು ಯತ್ನಿಸಿದ ಆತನ ಮಾವ ಆಸೀಫ್ ಮೇಲೆ ಗಂಭೀರ ಹಲ್ಲೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇನ್ನು ಘಟನೆಯಲ್ಲಿ ಆಸೀಫ್ ಸ್ಥಿತಿ ಗಂಭೀರವಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


























