ಪುತ್ತೂರು: ಪ್ರವೀಣ್ ನೆಟ್ಟಾರು ಹತ್ಯೆಯ ಪ್ರಕರಣವನ್ನು ಭೇಧಿಸುವಲ್ಲಿ ಶ್ರಮಿಸಿದ ಸಂಪ್ಯ ಠಾಣೆಯ ಎಸ್.ಐ. ಉದಯ ರವಿ ಹಾಗೂ ಹೆಡ್ ಕಾನ್ಸ್ಟೇಬಲ್ ಗಳಾದ ಪ್ರವೀಣ್ ರೈ ಪಾಲ್ತಾಡಿ ಮತ್ತು ಅದ್ರಾಮ ರವರಿಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಪರವಾಗಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ರವರು ಪ್ರಶಂಸನಾ ಪತ್ರ ಮತ್ತು ನಗದು ನೀಡಿದ್ದಾರೆ.

ಪ್ರವೀಣ್ ನೆಟ್ಟಾರು ರವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 15 ದಿನಗಳ ನಿರಂತರ ಕಾರ್ಯಾಚರಣೆ ಬಳಿಕ 7 ಮಂದಿ ಸಂಚುಕೋರರನ್ನು ಹಾಗೂ 3 ಮಂದಿ ಪ್ರಮುಖ ಆರೋಪಿಗಳನ್ನು ಪೊಲೀಸರ ಆರು ತಂಡಗಳು ಬಂಧಿಸುವಲ್ಲಿ ಸಫಲವಾಗಿದ್ದವು.

ಆರೋಪಿಗಳ ಪತ್ತೆ ಕಾರ್ಯಾಚರಣೆಯ ಸಲುವಾಗಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಹಿತ ಒಟ್ಟು 82 ಮಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಪರವಾಗಿ ಪ್ರಶಂಸನಾ ಪತ್ರ ಹಾಗೂ ನಗದನ್ನು ನೀಡಲಾಗಿದೆ.

ಈ ವೇಳೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸೋನವಣೆ ಋಷಿಕೇಶ್ ಭಗವಾನ್, ಪೊಲೀಸ್ ಅಧಿಕಾರಿಗಳಾದ ಕುಮಾರ್ ಚಂದ್ರ ಹಾಗೂ ಮತ್ತಿರರು ಉಪಸ್ಥಿತರಿದ್ದರು.


























