ಮಂಗಳೂರು: ಹಿಂದೂ ಮಹಾಸಭಾ ರಾಜ್ಯಧ್ಯಕ್ಷ ರಾಜೇಶ್ ಪವಿತ್ರನ್ ಅವರ ಕೊಲೆಗೆ ಸಂಚು ಮಾಡಲಾಗಿದೆ ಎಂದು ಆರೋಪಿಸಿ ಕೊಲೆ ಸಂಚಿನ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ಲಿಖಿತ ದೂರು ನೀಡಲಾಗಿದೆ.
ಸುರತ್ಕಲ್ ಪೊಲೀಸ್ ಠಾಣೆಯಲ್ಲೂ ಅಧ್ಯಕ್ಷ ದೂರು ದಾಖಲಿಸಿದ್ದು, ಮಾದ್ಯಮಗಳಿಗೆ ತನ್ನ ಕೊಲೆ ಸಂಚಿನ ಬಗ್ಗೆ ರಾಜೇಶ್ ಮಾಹಿತಿ ನೀಡಿದರು. ಹದಿನೈದು ದಿನಗಳ ಹಿಂದೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ರಾಜ್ಯ ಗೃಹ ಇಲಾಖೆಗೂ ಜಿಲ್ಲೆಯಲ್ಲಿ ಹಿಂದೂ ನಾಯಕರ ಕೊಲೆಗೆ ಸಂಚು ನಡೆಯುವ ಬಗ್ಗೆ ಮಾಹಿತಿ ನೀಡಲಾಗಿತ್ತು. ಆದರೆ ಆಗಸ್ಟ್ 17 ರಂದು 5 ಜನ ನನ್ನನ್ನ ವಿಚಾರಿಸಿಕೊಂಡು ಬಂದಿದ್ದಾರೆ. ನನ್ನ ಮಾಜಿ ಡ್ರೈವರ್ ಮನೆಗೆ ಹೋಗಿ ಬಂದೂಕು ತೋರಿಸಿ ವಿಚಾರಿಸಿದ್ದಾರೆ. ಪ್ರಶ್ನಿಸಿದಾಗ ಸಿಸಿಬಿ ಅಧಿಕಾರಿಗಳು ಎಂದು ಡ್ರೈವರ್ ಬಳಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಪೊಲೀಸರಿಗೆ ದೂರು ನೀಡಲಾಗಿದೆ.



























