ವಿಟ್ಲ: ಕಾರು ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿ ಹೊಡೆದು ಚರಂಡಿಗೆ ಬಿದ್ದ ಘಟನೆ ಚಂದಳಿಕೆ ಶಾಲೆಯ ಹತ್ತಿರ ಪುತ್ತೂರು ವಿಟ್ಲ ಮಾರ್ಗದ ರಸ್ತೆ ತಿರುವಿನಲ್ಲಿ ನಡೆದಿದೆ.

ಕಾರಿನಲ್ಲಿ ಮೂರು ಜನ ಪ್ರಯಾಣಿಸುತ್ತಿದ್ದು, ಸೀಟ್ ಬೆಲ್ಟ್ ಧರಿಸಿರುವುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ ಎಂದು ವರದಿಯಾಗಿದೆ.
ಖ್ಯಾತ ಫೋಟೋಗ್ರಾಫರ್ ಸದಾಶಿವ ಬನ(ಶಿಲ್ಪಿ) ಅವರಿಗೆ ಸೇರಿದ
ಕಾರು ಇದಾಗಿದೆ ಎಂದು ತಿಳಿದು ಬಂದಿದೆ.



























