ಪುತ್ತೂರು: ಪ್ರಖ್ಯಾತ ಪ್ರಭು ಕ್ಯಾಟರರ್ಸ್ ನ ಮಾಲಕ ಪ್ರಭಾಕರ
ಪ್ರಭು(39) ರವರು ಮೇ.22 ರಂದು ಸಂಜೆ ನಿಧನರಾದರು ಎಂದು ತಿಳಿದು ಬಂದಿದೆ.
ಪ್ರಭಾಕರ ಪ್ರಭು ರವರು ಬನ್ನೂರು ಗ್ರಾಮದ ಕೆಮ್ಮಾಯಿ ನಿವಾಸಿ
ಸೀತಾರಾಮ ಪ್ರಭು ರವರ ಪುತ್ರರಾಗಿದ್ದು, ಕ್ಯಾಟರಿಂಗ್ ಜೊತೆಗೆ
ಮನೆಯಲ್ಲಿ ಬೇಕರಿ ತಿಂಡಿಗಳನ್ನು ತಯಾರಿಸಿ ಲೈನ್ ಸೇಲ್ ಮಾಡುತ್ತಿದ್ದರು.

ಇಂದು ಬೆಳಿಗ್ಗೆಯಿಂದ ಮನೆಯಲ್ಲಿದ್ದ ಅವರು ಸಂಜೆ ವೇಳೆ ಲೈನ್ ಸೇಲ್ ಗೆ ಹೊರಡಲು ಮುಂದಾದಾಗ ಕುಸಿದು ಬಿದ್ದಿದ್ದಾರೆ ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಅವರು ಹೃದಯಘಾತಕ್ಕೆ
ತುತ್ತಾಗಿ ಮೃತಪಟ್ಟಿರಬಹುದು
ಎಂದು ಶಂಕಿಸಲಾಗಿದೆ.
ನಾಲ್ಕು ವರ್ಷದ ಹಿಂದೆಯಷ್ಟೇ ಅವರ ವಿವಾಹವಾಗಿತ್ತು. ಅವರು ಚಿಕ್ಕಮುಡ್ನೂರು ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾಗಿದ್ದರು. ಅವರ ಅಕಾಲಿಕ ನಿಧನ ಬಂಧು ಮಿತ್ರರಿಗೆ ದಿಗ್ಧಮೆ ಮೂಡಿಸಿದೆ.
ಮೃತರು ಪತ್ನಿ ರಜನಿ, 2 ವರ್ಷದ ಪುತ್ರಿ, ತಾಯಿ ಶಾರದಾ, ಸಹೋದರರಾದ ಹರೀಶ್ ಪ್ರಭು, ಸುಧಾಕರ ಪ್ರಭು ಸಹೋದರಿಯರಾದ ಸುಮಿತ್ರಾ ಹಾಗೂ ಸೌಮ್ಯ ರನ್ನು ಅಗಲಿದ್ದಾರೆ.

























