ಪುತ್ತೂರು : ದ್ವಿಚಕ್ರ ವಾಹನ ಹಾಗೂ ಕಾರ್ ನಡುವೆ ಅಫಘಾತ ವಾದ ಘಟನೆ ಮಿತ್ತೂರಿನಲ್ಲಿ ನಡೆದಿದೆ.

ಕಬಕ ಕಡೆಗೆ ಬರುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರು ಮತ್ತು ಮಿತ್ತೂರು ಕಡೆಗೆ ತೆರಳುತ್ತಿದ್ದ ಜುಪಿಟರ್ ದ್ವಿಚಕ್ರ ವಾಹನಗಳ ನಡುವೆ ಮಿತ್ತೂರು ತಿರುವಿನ ಬಳಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಘಟನೆಯಿಂದಾಗಿ ದ್ವಿಚಕ್ರ ವಾಹನ ಸವಾರ ವಾಸಪ್ಪ ಸಪಲ್ಯ ರವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.


























