ವಿಟ್ಲ: ಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಮೊಸರು ಕುಡಿಕೆ ಉತ್ಸವ ಸಮಿತಿ , ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘ ಹಾಗೂ ಶ್ರೀವರ ಯುವಕ ಮಂಡಲ (ರಿ) ಪೂರ್ಲಪ್ಪಾಡಿ ಇದರ ಸಹಯೋಗದಲ್ಲಿ 20ನೇ ವರ್ಷದ ಮೊಸರು ಕುಡಿಕೆ ಉತ್ಸವವು ಪೂರ್ಲಪ್ಪಾಡಿ ಅಂಗನವಾಡಿ ಕೇಂದ್ರದ ವಠಾರದಲ್ಲಿ ನಡೆಯಿತು.

ವಸಂತ ಗೌಡ ನಡುಮನೆ ಕಾರ್ಯಕ್ರಮ ಉದ್ಘಾಟಿಸಿದರು. ಅನಂತರ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಸಂಜೆ ಬಹುಮಾನ ವಿತರಣಾ ಸಮಾರಂಭ ವಿಟ್ಲ ಪಡ್ನೂರು ಗ್ರಾಮ ಪಂಚಾಯತು ಅಧ್ಯಕ್ಷೆ ರೇಶ್ಮಾಶಂಕರಿ ಬಳಿಪಗುಲಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಅತಿಥಿಗಳಾಗಿ ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ವಕೀಲರಾದ ನಟೇಶ್ ವಿಟ್ಲ, ರೋಹಿತ್ ರೈ ಚೆಂಬರಡ್ಕ, ವನಜ ಸುಂದರ ಗೌಡ, ನಿತಿನ್ ಕೆ ಸೊರಂಗದಮೂಲೆ, ಗ್ರಾಮ ಪಂ. ಸದಸ್ಯರಾದ ಜಯಂತ್ ಪಿ ಹಾಗೂ ಜಯಲಕ್ಷ್ಮೀ, ಸಮಿತಿ ಅಧ್ಯಕ್ಷ ವಕೀಲರು ನೋಟರಿ ರಾಮಣ್ಣ ಗೌಡ ದೇವರಮನೆ, ಗೌರವಾಧ್ಯಕ್ಷ ಈಶ್ವರ ಭಟ್ ಪೂರ್ಲಪ್ಪಾಡಿ ಭಾಗವಹಿಸಿದ್ದರು.

ಸಭಾ ಕಾರ್ಯಕ್ರಮದಲ್ಲಿ ಏಕಲವ್ಯ ಪ್ರಶಸ್ತಿ ವಿಜೇತರು ಹಾಗೂ ಏಷಿಯನ್ ಚಾಂಪಿಯನ್ಶಿಪ್ನ(ನೆಟ್ಬಾಲ್) ಚಿನ್ನದ ಪದಕ ವಿಜೇತರಾದ ನಿತಿನ್ ಕೆ ಸೊರಂಗದಮೂಲೆ ರವರನ್ನು ಸನ್ಮಾನಿಸಲಾಯಿತು. ಅಲ್ಲದೇ ಹತ್ತನೇ ಮತ್ತು 12ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು ಮತ್ತು ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ನ ಸದಸ್ಯರನ್ನು ಹಾಗೂ ಭಾರತೀಯ ಗಡಿ ಭದ್ರತಾ ಪಡೆ ಕಲ್ಕತ್ತಾದಲ್ಲಿ ಸೇವೆ ಸಲ್ಲಿಸುತ್ತಿರುವ ಕುಮಾರಿ ರಮ್ಯ ಡಿ ಬಲ್ನಾಡು ರನ್ನು ಈ ಸಂದರ್ಭದಲ್ಲಿ ಸಮಿತಿಯಿಂದ ಗೌರವಿಸಲಾಯಿತು. ಸಮಿತಿಯ ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿ ವರದಿ ಮಂಡಿಸಿದರು. ಕೃಪಾ ದೇವರಮನೆ ಪ್ರಾರ್ಥಿಸಿದರು. ಗಿರೀಶ್ ಪಿ ಆರ್ ಬಹುಮಾನ ವಿತರಣೆಯಲ್ಲಿ ಸಹಕರಿಸಿ, ಯತೀಶ್ ಪಿ ವಂದಿಸಿದರು. ಹರೀಶ್ ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು. ಶ್ರೀವರ ಯುವಕ ಮಂಡಲದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಊರವರಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕಿರು ನಾಟಕ, ಶಾರದಾ ಆರ್ಟ್ಸ್ ಕಲಾವಿದೆರ್ (ರಿ) ಮಂಜೇಶ್ವರ ಇವರಿಂದ ‘ಯಾನ್ ಉಲ್ಲೆತ್ತಾ’ ತುಳು ನಾಟಕ ನಡೆಯಿತು.

































