ವಿಟ್ಲ: ಕೆಲವು ಸಮಯಗಳ ಹಿಂದೆ ವಿಟ್ಲ ಠಾಣಾ ವ್ಯಾಪ್ತಿಯ ಕುದ್ದುಪದವು ಎಂಬಲ್ಲಿ ಜಗನ್ನಾಥ ಶೆಟ್ಟಿ ಎಂಬವರ ಪಾಲುದಾರಿಕೆಯ ಎಸ್ ಆರ್ ಪಂಪ್‌ನಲ್ಲಿ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪತ್ತೆ ಹಚ್ಚಿ ಪೊಲೀಸರು ಬಂಧಿಸಿದ್ದಾರೆ.
ಈಗಾಗಲೇ ಪೊಲೀಸರ ಬಂಧನದಲ್ಲಿದ್ದ ಆರೋಪಿ ಕಾಸರಗೋಡು ಕುಂಬೈ ಬಂಬ್ರಾಣ ನಿವಾಸಿ ಫೈಜಲ್ ಅಲಿಯಾಸ್ ಪಗ್ಗು ಎಂಬಾತನನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಈತನನ್ನು ಬಂಧಿಸಿದ್ದು, ಈ ವೇಳೆ ಈತ ಪಾಲ್ಗೊಂಡಿದ್ದ ಇನ್ನಷ್ಟು ಕೃತ್ಯಗಳು ಬೆಳಕಿಗೆ ಬಂದಿದೆ.
ಎಸ್ಎಆರ್ ಪಂಪ್ ನಲ್ಲಿ ನಗದು ಕಳವು ಪ್ರಕರಣ ಹಾಗೂ ಕೆಲ ಸಮಯಗಳ ಹಿಂದೆ ವಿಟ್ಲದ ಮುರಳಿ ಎಂಬವರ ಗೂಡ್ಸ್ ಟೆಂಪೋವನ್ನು ಕಳವುಗೈದಿದ್ದು, ನಂತರ ಕುದ್ದುಪದವು ಎಸ್ಆರ್ ಪೆಟ್ರೋಲ್ ಪಂಪ್‌ನಲ್ಲಿ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಯನ್ನು ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ನಿಡ್ಪಳ್ಳಿ ಗ್ರಾಮದ ಮಹಿಳೆಯೋರ್ವರ ಕರಿಮಣಿ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಜಲ್ ನನ್ನು ಪುತ್ತೂರು ಪೊಲೀಸರು ಬಂಧಿಸಿದ್ದರು.


























