ಪುತ್ತೂರು: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದ ಎಲ್.ಕೆ.ಜಿ ವಿದ್ಯಾರ್ಥಿನಿ ಅನ್ವಿಕಾ ಪ್ರಭುಳ ಹೆಸರು ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ನಲ್ಲಿ ದಾಖಲಾಗಿದೆ.

3ವರ್ಷ 8 ತಿಂಗಳ ಅನ್ವಿಕಾ ಅತೀ ಕಿರಿಯ ವಯಸ್ಸಿನಲ್ಲಿ 35 ಹಣ್ಣುಗಳ, 16 ಬಣ್ಣಗಳ, ಹೆಸರನ್ನು ಗುರುತಿಸಿರುತ್ತಾಳೆ. 2 ಶ್ಲೋಕ, 4 ಪದ್ಯಗಳು, ದೇಹದ 20 ಅಂಗಗಳ ಹೆಸರುಗಳನ್ನು, 8 ರಾಷ್ಟ್ರ ಲಾಂಛನವನ್ನು ಗುರುತಿಸಿದ ಸಾಧನೆ ಈಕೆಯದು.
ಅನ್ವಿಕಾ ಪ್ರಭು ಪುತ್ತೂರು ಕೋಡಿಂಬಾಡಿಯ ನಿವಾಸಿ ಅಶೋಕ್ ಪ್ರಭು.ಡಿ.ಕೆ ಹಾಗೂ ಶ್ವೇತಾ ಪ್ರಭು ರವರ ಪುತ್ರಿ.
3ವರ್ಷ 8 ತಿಂಗಳ ಅತಿ ಕಿರಿಯ ವಯಸ್ಸಿನಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಈಕೆಯ ಹೆಸರು ದಾಖಲೆಯಾಗಿದೆ ಹಾಗೂ ನಮ್ಮ ಶಾಲೆಯ ಇತಿಹಾಸದಲ್ಲಿ ಇದೊಂದು ವಿಶಿಷ್ಠ ಸಾಧನೆಯಾಗಿದೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


























