ವಿಟ್ಲ: ಆರ್. ಎಸ್. ಎಸ್ ನ ಹಿರಿಯ ಕಾರ್ಯಕರ್ತ ಕೊಮ್ಮುಂಜೆ ವೆಂಕಪ್ಪ ನಾಯ್ಕ್(80) ರವರು ಆ.27 ರಂದು ನಿಧನರಾದರು.

ವೆಂಕಪ್ಪ ನಾಯ್ಕ್ ರವರು ಆರ್. ಎಸ್. ಎಸ್ ನ ಹಿರಿಯ ಕಾರ್ಯಕರ್ತ ರಾಗಿದ್ದು, ಮಾಣಿಲ ಗ್ರಾಮದಲ್ಲಿ ಸಂಘದ ಶಾಖೆಯನ್ನು ವಿಸ್ತರಿಸುವುದರಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ ಸಹಕಾರಿ ಕ್ಷೇತ್ರದಲ್ಲಿ, ಹಾಗೆಯೇ ಹಲವಾರು ಸಾಮಾಜಿಕ, ಧಾರ್ಮಿಕ, ರಾಜಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿ ಸಾರ್ವಜನಿಕ ವಲಯದಲ್ಲಿ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಮೃತರು ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರು ಮತ್ತು ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.


























