ಪುತ್ತೂರು: ನಗರಸಭೆ ವ್ಯಾಪ್ತಿಯ ಬನ್ನೂರು ನೆಕ್ಕಿಲದಲ್ಲಿ ಹೆಣ್ಣು ಮಗುವಿನೊಂದಿಗೆ ಪ್ಲಾಸ್ಟಿಕ್ ಹೊದಿಸಿದ ಗುಡಿಸಲಿನಲ್ಲಿ ವಾಸಿಸುತ್ತಿರುವ ಹೊನ್ನಮ್ಮ ಎಂಬವರಿಗೆ ಮನೆ ನಿರ್ಮಿಸಿ ಕೊಡಲು ಸಂಪೂರ್ಣ ಸಹಕಾರ ನೀಡುವುದಾಗಿ ರೈ ಎಸ್ಟೇಟ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಪ್ರವರ್ತಕರಾದ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ಭರವಸೆ ನೀಡಿದರು.

ಕಳೆದ ನಾಲ್ಕು ವರ್ಷಗಳಿಂದ ಮನೆ ನಿರ್ಮಿಸಲು ಹೊನ್ನಮ್ಮ ರವರು ಪ್ರಯತ್ನ ಪಡುತ್ತಿದ್ದು, ಅವರ ಪತಿ ನಿಧನರಾದ ಬಳಿಕ ದಿಕ್ಕು ತೋಚದೆ ಹೆಣ್ಣು ಮಗುವನ್ನು ಸಾಕುವ ಹೊಣೆಗಾರಿಕೆಯೊಂದಿಗೆ ಹೊನ್ನಮ್ಮ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಹೊನ್ನಮ್ಮ ರವರ ಸಂಕಷ್ಟದ ಕುರಿತು ಮಾಹಿತಿ ತಿಳಿದ ಅಶೋಕ್ ಕುಮಾರ್ ರೈ ಅಭಿಮಾನಿ ಬಳಗ ಬಡಗನ್ನೂರು ಇದರ ಸದಸ್ಯರು ಅಶೋಕ್ ರೈಯವರಿಗೆ ತಿಳಿಸಿದ್ದರು. ಕೂಡಲೇ ಸ್ಪಂದಿಸಿದ ಅಶೋಕ್ ರೈಯವರು ಹೊನ್ನಮ್ಮ ರವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ ಮನೆ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಅಶೋಕ್ ಕುಮಾರ್ ರೈ ಅಭಿಮಾನಿ ಬಳಗದ ಪ್ರಕಾಶ್ ರೈ ಕೊಯಿಲ , ಗುರುಪ್ರಸಾದ್ ರೈ ಕುದ್ಕಾಡಿ, ಶರತ್ ರಾಜ್ ರೈ ಕೊಯಿಲ , ಪ್ರದೀಪ್ ಪಾಟಾಳಿ ಪುತ್ತೂರು, ಶಿವಾಜಿ ನೆಕ್ಕಿಲ, ಮಹೇಶ್ ಉರ್ಲಾಂಡಿ , ರಮೇಶ್ ತೆಂಕಿಲ, ಕಾರ್ತಿಕ್ ತೆಂಕಿಲ, ಪವನ್ ಕುಮಾರ್, ಕೇಶವ ಬನ್ನೂರು, ಲೋಕೇಶ್ ಬನ್ನೂರು, ಗಣೇಶ್ ಬನ್ನೂರು, ವಸಂತ ತೆಂಕಿಲ, ಹರೀಶ್ ಬನ್ನೂರು, ಜಗದೀಶ್ ಬಪ್ಪಳಿಗೆ ಹಾಗೂ ನೆಕ್ಕಿಲ ಪರಿಸರದ ಯುವಕರು ಉಪಸ್ಥಿತರಿದ್ದರು.





























