ಪುತ್ತೂರು: ಸಂಸದರು, ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರು ಆ.28 ರಂದು ಪುತ್ತೂರಿನ ಖ್ಯಾತ ವೈದ್ಯರಾದ ಡಾ. ಎಂ.ಕೆ. ಪ್ರಸಾದ್ ರನ್ನು ಭೇಟಿಯಾದರು.

ಆದರ್ಶ ಆಸ್ಪತ್ರೆಗೆ ಭೇಟಿ ನೀಡಿದ ಕಟೀಲ್ ರವರು ಪ್ರತಿಷ್ಠಿತ ಐಎಂಎ-ಕೆಎಸ್ ಬಿ ಡಾಕ್ಟರ್ಸ್ ಡೇ ಪ್ರಶಸ್ತಿಗೆ ಭಾಜನರಾದ ಜನಪ್ರಿಯ ವೈದ್ಯರಾದ ಡಾ. ಎಂ.ಕೆ. ಪ್ರಸಾದ್ ರವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಹಾಗೂ ಆಸ್ಪತ್ರೆ ಸಿಬ್ಬಂದಿಗಳು, ಮತ್ತಿತರರು ಉಪಸ್ಥಿತರಿದ್ದರು.

























