ವಿಟ್ಲ: ಫಾತಿಮಾ ಮಾತೆಯ ದೇವಾಲಯ, ಮುಚ್ಚಿರಪದವು ಪೆರುವಾಯಿ, ಭಾರತೀಯ ಕೆಥೋಲಿಕ್ ಯುವ ಸಂಚಾಲನ ಹಾಗೂ ಕೆಥೋಲಿಕ್ ಸಭಾ ಪೆರುವಾಯಿ ಘಟಕ ಇದರ ಸಹಯೋಗದೊಂದಿಗೆ “ಗದ್ದೆಯಲ್ಲಿ ಗಮ್ಮತ್ತು” ಕಾರ್ಯಕ್ರಮವು ಪೆರುವಾಯಿಯಲ್ಲಿ ನಡೆಯಿತು.

ಹಗ್ಗಜಗ್ಗಾಟ, ಮಡಕೆ ಒಡೆಯುವುದು, ಓಟ, ಹಿಮ್ಮುಖ ಓಟ ಇನ್ನಿತರ ಸ್ಪರ್ಧೆಗಳು ಮಕ್ಕಳ, ಪುರುಷರ, ಮಹಿಳೆಯರ ವಿಭಾಗದಲ್ಲಿ ನಡೆಯಿತು.

ಸಭಾ ಕಾರ್ಯಕ್ರಮದಲ್ಲಿ ಚರ್ಚ್ನ ಧರ್ಮಗುರುಗಳಾದ ವಂ.ವಿಶಾಲ್ ಮೋನಿಸ್ ಪ್ರಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಬಿಜೆಪಿ ಮುಖಂಡ ಕ್ಯಾಪ್ಟನ್ ಬ್ರಿಜೇಶ್ ಚೌಟ ಗ್ರಾಮೀಣ ಭಾಗದಲ್ಲಿ ಆಯೋಜಿಸಿದ ಈ ಕಾರ್ಯಕ್ರಮದ ಸಂಘಟಕರನ್ನು ಪ್ರಶಂಸಿಸಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಶ್ರೀಕೃಷ್ಣ ವಿಟ್ಲ, ವಿನ್ಸೆಂಟ್ ಡಿಸೋಜ ಉಪಸ್ಥಿತರಿದ್ದರು.





























