ಮಡಿಕೇರಿ: ಕೋಳಿ ಸಾಕಣಿಕ ಕೇಂದ್ರದಿಂದ ಕೋಳಿ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಚಾಲಕ ಸಾವನ್ನಪ್ಪಿರುವ ಘಟನೆ ಸುಂಟಿಕೊಪ್ಪದಲ್ಲಿ ನಡೆದಿದೆ.
ವಿಟ್ಲ ನಿವಾಸಿ ನಾಗಭೂಷಣ್(36) ಮೃತ ವ್ಯಕ್ತಿ.

ಆ.30 ರಂದು ಮುಂಜಾನೆ ಸುಮಾರು 5 ಗಂಟೆ ಸಮಯದಲ್ಲಿ ಮೈಸೂರಿನಿಂದ ಮಂಗಳೂರು ಕಡೆಗೆ ಕೋಳಿ ಸಾಗಾಟ ಮಾಡುತ್ತಿದ್ದ ಲಾರಿ ಸುಂಟಿಕೊಪ್ಪ ಸಮೀಪ ಮಾರುತಿನಗರ ತಿರುವಿನಲ್ಲಿ
ಚಾಲಕನ ನಿಯಂತ್ರಣ ತಪ್ಪಿ ಮಗುಚಿಕೊಂಡಿದ್ದು ಲಾರಿ
ಚಾಲಕ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಅಪಘಾತ ನಡೆದ ಲಾರಿ ಮಂಗಳೂರಿನ ಕೊಸ್ಟಲ್ ಫಾರ್ಮ್ಸ್ ಗೆ ಸೇರಿದ್ದು ಎಂದು ತಿಳಿದು ಬಂದಿದೆ.
























