ಪುತ್ತೂರು: ಆಧ್ಯಾ ಬ್ಯಾಗ್ ಮಳಿಗೆ ಮಾಲಕರಾದ ಅಶೋಕ್ ರಾವ್ ರವರ ಹುಟ್ಟುಹಬ್ಬವನ್ನು ಹಿಂದೂಸ್ತಾನ್ ಫ್ರೆಂಡ್ಸ್ ವತಿಯಿಂದ ಪ್ರಜ್ಞಾ ವಿಶೇಷ ಮಕ್ಕಳ ಆಶ್ರಮದಲ್ಲಿ ಆಯೋಜಿಸಲಾಯಿತು.

ಆಶ್ರಮದಲ್ಲಿ ಕೇಕ್ ಕತ್ತರಿಸಿ, ಆಶ್ರಮದ ಮಕ್ಕಳಿಗೆ ಸಿಹಿತಿಂಡಿ, ಹಣ್ಣು-ಹಂಪಲು ನೀಡುವ ಮೂಲಕ ವಿಶೇಷ ಮಕ್ಕಳ ಜೊತೆ ವಿಶಿಷ್ಟ ರೀತಿಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಹಿಂದೂಸ್ತಾನ್ ಫ್ರೆಂಡ್ಸ್ ನ ಸದಸ್ಯ ಉನೈಸ್ ಗಡಿಯಾರ್, ಹರೀಶ್, ಶರೀಫ್ ಬಲ್ನಾಡ್, ಜಾಬೀರ್, ಹನೀಫ್ ಇರ್ದೆ, ಆಶಿಕ್ ಹುಡಾ, ಸಾದಿಕ್ ಮಸೂರ್, ರಿಯಾಜ್ ಉಪಸ್ಥಿತರಿದ್ದರು.



























