ಪಾಕಿಸ್ತಾನಕ್ಕೆ ಇದೀಗ ಭೀಕರ ಮಳೆ ಹಾಗೂ ಪ್ರವಾಹದಿಂದಾಗಿ ಬರಸಿಡಿಲು ಬಡಿದಂತಾಗಿದೆ. ದಶಕದಲ್ಲೇ ಕಂಡು ಕೇಳರಿಯದ ಪ್ರವಾಹದಿಂದ ಲಕ್ಷಾಂತರ ಪಾಕಿಸ್ತಾನ ಜನತೆ ತತ್ತರಿಸಿದ್ದಾರೆ.
ಮಾನೂನ್ಸ್ ಪ್ರವಾಹದಿಂದಾಗಿ ಪಾಕಿಸ್ತಾನದ ಮೂರನೇ ಒಂದು ಭಾಗ ನೀರಿನಲ್ಲಿ ಮುಳುಗಡೆಯಾಗಿದೆ. ರಸ್ತೆಗಳು, ಬೆಳೆಗಳು, ಸೇತುವೆಗಳನ್ನು ಕೊಚ್ಚಿಕೊಂಡು ಹೋಗಿವೆ. ರಣ ಭೀಕರ ಪ್ರವಾಹದಿಂದ 1,100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಮಂದಿ ಜನರು ನಿರಾಶ್ರಿತರಾಗಿದ್ದಾರೆ.
ಇನ್ನು ಡೆಡ್ಲಿ ಪ್ರವಾಹದಲ್ಲಿ 3,451 ಕಿ.ಮೀ. ರಸ್ತೆ, 170 ಸೇತುಗಳು ಕೊಚ್ಚಿ ಹೋಗಿವೆ.. 9.50 ಲಕ್ಷ ಮನೆಗಳು, 170 ಶಾಪ್‌ಗಳಿಗೆ ಹಾನಿಯಾಗಿದೆ. ಬಲೂಚಿಸ್ತಾನ, ಗಿಲ್ಲಿಟ್ ಬಾಲ್ಟಿಸ್ತಾನ್, ಖೈಬರ್, ಸಿಂಧ್ ಭಾಗದಲ್ಲಿ ಅಪಾರ ಹಾನಿ ಸಂಭವಿಸಿದೆ.
ಗುಡ್ಡಗಾಡು ಪ್ರದೇಶ ನೂರಾರು ಹಳ್ಳಿಗಳು ಪ್ರವಾಹದಲ್ಲಿ ಮುಳುಗಿ ಹೋಗಿವೆ. ತಿನ್ನಲು ಆಹಾರ, ಕುಡಿಯಲು ನೀರಿಲ್ಲದೆ ಜನರು ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಇನ್ನು ಪ್ರವಾಹದಲ್ಲಿ ಸಿಲುಕಿರುವವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗುತ್ತಿದೆ. ಪ್ರವಾಹದಿಂದ ಅಂದಾಜು 10 ಶತಕೋಟಿ ಡಾಲರ್ ಮೌಲ್ಯದ ಹಾನಿಯುಂಟಾಗಿದೆ ಎಂದು ಪಾಕಿಸ್ತಾನದ ಸಚಿವರು ಹೇಳಿಕೊಂಡಿದ್ದಾರೆ. ನೆರೆಯಿಂದಾಗಿ ಟೋಮ್ಯಾಟೋ, ಈರುಳ್ಳಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ನೆರೆ ಕುಟುಂಬಗಳಿಗೆ ಸಹಾಯಹಸ್ತ ಚಾಚುವಂತೆ, ಪಾಕ್ ಆರ್ಮಿ, ಪಾಕ್ ಸರ್ಕಾರ, ನೆರೆ ರಾಷ್ಟ್ರಗಳಲ್ಲಿ ಮನವಿ ಮಾಡಿಕೊಂಡಿದೆ.
ಪಾಕಿಸ್ತಾನದ ಜನರು ಪ್ರವಾಹದಿಂದ ಸಲುಗಿದ್ದಾರೆ. ನನ್ನ ಹೃದಯ ಭಾರವಾಗಿದೆ. ಅಲ್ಲಿನ ಪರಿಸ್ಥಿತಿ ಶೀಘ್ರ ಸುಧಾರಿಸಲಿ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇತಿಹಾಸದ ಅತ್ಯಂತ ಭೀಕರ ಪ್ರವಾಹ ಪರಿಸ್ಥಿತಿಗೆ ಸಿಲುಕಿರುವ ಪಾಕಿಸ್ತಾನದ ಬಗ್ಗೆ ಭಾರತ ಸರ್ಕಾರದ ಪರವಾಗಿ ಇದೇ ಮೊದಲ ಬಾರಿಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿ, ಜನರ ನೋವಿಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.
‘ಪಾಕಿಸ್ತಾನದಲ್ಲಿ ಪ್ರವಾಹದಿಂದ ಸಾಕಷ್ಟು ಜನರು ಜೀವ ಕಳೆದುಕೊಂಡಿದ್ದು ತಿಳಿದು ಬೇಸರವಾಯಿತು. ನೈಸರ್ಗಿಕ ದುರಂತದಲ್ಲಿ ಗಾಯಗೊಂಡವರಿಗೆ, ಆಸ್ತಿಪಾಸ್ತಿ ಕಳೆದುಕೊಂಡವರಿಗೆ ಭಾರತೀಯರ ಹೃದಯ ತುಂಬಿದ ಸಂತಾಪಗಳು. ಪಾಕಿಸ್ತಾನದಲ್ಲಿ ಬೇಗ ಸಹಜ ಸ್ಥಿತಿ ನೆಲೆಸುವಂತಾಗಲಿ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
Saddened to see the devastation caused by the floods in Pakistan. We extend our heartfelt condolences to the families of the victims, the injured and all those affected by this natural calamity and hope for an early restoration of normalcy.
— Narendra Modi (@narendramodi) August 29, 2022


























