ಬಂಟ್ವಾಳ: ತನ್ನ ಎರಡು ಮಕ್ಕಳ ಜೊತೆ ತಾಯಿ ಕಾಣೆಯಾಗಿರುವ ಘಟನೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಜಕ್ರಿಬೆಟ್ಟು ಎಂಬಲ್ಲಿ ನಡೆದಿದ್ದು, ಕಾಣೆಯಾದ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಕ್ರಿಬೆಟ್ಟು ನಿವಾಸಿ ಮೊಹಮ್ಮದ್ ಶರೀಫ್ ಎಂಬವರ ಪತ್ನಿ ಆಯಿಶತುಲ್ ಝಹಿಲ್ ಹಾಗೂ ಎರಡು ಮಕ್ಕಳು ಕಾಣೆಯಾದವರು.
ಝಹಿಲ್ ಸೆ.4 ರಂದು ಮುಂಜಾನೆ ಸುಮಾರು 2 ಗಂಟೆಯಿಂದ 4 ಗಂಟೆಯ ಸಮಯದಲ್ಲಿ ತನ್ನ ಎರಡು ಮಕ್ಕಳೊಂದಿಗೆ ಕಾಣೆಯಾಗಿದ್ದು, ಹುಡುಕಿ ಕೊಡುವಂತೆ ಪತಿ ಠಾಣೆಗೆ ದೂರು ನೀಡಿದ್ದಾರೆ.


























