ವಿಟ್ಲ: ದ.ಕ.ಜಿಲ್ಲಾ ಪಂಚಾಯತ್ ಮಂಗಳೂರು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವಿಟ್ಲ, ಅಡ್ಯನಡ್ಕ ಮತ್ತು ಗ್ರಾಮ ಪಂಚಾಯತ್ ಕೇಪು ಇದರ ಜಂಟಿ ಆಶ್ರಯದಲ್ಲಿ ಕೇಪು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೆ.6 ರಂದು ಉಚಿತ ಹುಚ್ಚು ನಾಯಿ ನಿರೋಧಕ ಚುಚ್ಚುಮದ್ದು ಲಸಿಕೆಯನ್ನು ಕೇಪು ಗ್ರಾಮದ 9 ಕೇಂದ್ರಗಳಲ್ಲಿ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಪಶು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ವಿಟ್ಲ ಮತ್ತು ಅಡ್ಯನಡ್ಕ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ, ಕಾರ್ಯದರ್ಶಿ, ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

