ಪುತ್ತೂರು: ಬಪ್ಪಳಿಗೆ ನಿವಾಸಿ ಮಹಮ್ಮದ್ ಶರೀಫ್ (37) ಕುವೈಟ್ ನಲ್ಲಿ ಹೃದಯಾಘಾತದಿಂದಾಗಿ ಸೆ.6 ರಂದು ನಿಧನರಾದರು.
ಬಪ್ಪಳಿಗೆ ನಿವಾಸಿ ಮೂಸಚ್ಚ ಎಂಬವರ ಪುತ್ರನಾದ ಶರೀಫ್ ಕುವೈಟ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಪತ್ನಿ ಮಕ್ಕಳ ಜೊತೆ ಅಲ್ಲಿಯೇ ವಾಸವಿದ್ದರು.
ಮೃತರು ಪತ್ನಿ, ಇಬ್ಬರು ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
ಮೃತರ ದಫನ ಕಾರ್ಯ ಕುವೈಟ್ ನಲ್ಲೇ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.