ಮಂಗಳೂರು: ಪ್ರವೀಣ್ ನೆಟ್ಟಾರು ಪ್ರಕರಣವನ್ನು ರಾಜ್ಯ ಸರಕಾರ ಎನ್ಐಎ ಗೆ ವಹಿಸಿದೆ. ದ.ಕ ಜಿಲ್ಲೆಯಲ್ಲಿ ಎನ್ಐಎ ದಾಳಿ ಮುಂದುವರಿದಿದ್ದು, ಎಸ್.ಡಿ.ಪಿ.ಐ ಮುಖಂಡ ರಿಯಾಝ್ ಫರಂಗಿಪೇಟೆ ಮನೆಗೆ ಗುರುವಾರ ಬೆಳಗ್ಗೆ ಎನ್ಐಎ ದಾಳಿ ಮಾಡಿದೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಸೆ. 7 ರಂದು ಒಟ್ಟು 33 ಕಡೆ ದಾಳಿ ನಡೆಸಿತ್ತು. ಇದರ ಮುಂದುವರಿದ ಭಾಗವಾಗಿ ಇಂದು ಬೆಳಿಗ್ಗೆ ಎಸ್.ಡಿ.ಪಿ.ಐ ರಾಷ್ಟ್ರೀಯ ನಾಯಕ ರಿಯಾಝ್ ಫರಂಗಿಪೇಟೆ ಮನೆಗೆ ಎನ್ಐಎ ದಾಳಿ ನಡೆಸಿದೆ.
ಇದನ್ನು ವಿರೋಧಿಸಿ ಮನೆಮುಂದೆ ಎಸ್.ಡಿ.ಪಿ.ಐ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.