ವಿಟ್ಲ: ಪ್ರಾಥಮಿಕ ಆರೋಗ್ಯ ಕೇಂದ್ರ ಪಾಣಾಜೆ ಇದರ ಉಪ ಕೇಂದ್ರ ಕಬಕದಲ್ಲಿ 29 ವರ್ಷಗಳ ಕಾಲ ಹಾಗೂ ದ.ಕ. ಜಿಲ್ಲೆಯ ವಿವಿದೆಡೆ ಒಟ್ಟು 35 ವರ್ಷಕ್ಕಿಂತಲೂ ಅಧಿಕ ವರ್ಷಗಳ ಕಾಲ ಆರೋಗ್ಯ ಸಹಾಯಕಿಯಾಗಿ ಮತ್ತು ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಯಾಗಿ ಸರಕಾರದ ಆರೋಗ್ಯ ಸೇವೆಯನ್ನು ಜನರಿಗೆ ತಲಪಿಸುವಲ್ಲಿ ಸಮರ್ಥವಾಗಿ ನಿರ್ವಹಿಸಿ ಜನಮೆಚ್ಚುಗೆ ಪಡೆದು 2 ವರ್ಷಗಳ ಅವಧಿ ಪೂರ್ವ ನಿವೃತ್ತಿ ಹೊಂದುತ್ತಿರುವ ಬಿ.ಎಂ. ಶೋಭಾ ರವರನ್ನು ಫ್ರೆಂಡ್ಸ್ ಮುರ ವತಿಯಿಂದ ಅವರ ನಿವಾಸದಲ್ಲಿ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು.
![](https://zoomintv.online/wp-content/uploads/2022/09/WhatsApp-Image-2022-09-07-at-9.51.32-PM-1024x663.jpeg)
ಕಬಕ ಗ್ರಾಮದ ಎಲ್ಲಾ ವರ್ಗದವರನ್ನು ಸಮಾನವಾಗಿ ಪರಿಗಣಿಸಿ ಕೊರೊನಾ ಸಮಯದಲ್ಲಿ ಅತ್ಯಂತ ಕಾಳಜಿಯಿಂದ ಸೇವೆಗೈದ ನಿವೃತ್ತಿ ಜೀವನ ಸುಖಮಯವಾಗಿರಲೆಂದು ಫ್ರೆಂಡ್ಸ್ ಮುರ ವತಿಯಿಂದ ಶುಭ ಹಾರೈಸಿದರು.
ಬಿ.ಎಂ. ಶೋಭಾ ರವರು ಮಂಗಳೂರಿನ ನಿವೃತ್ತ ಕೆ.ಎಂ.ಸಿ. ಉದ್ಯೋಗಿ ಸುದರ್ಶನ್ ಪುತ್ತೂರು ರವರ ಪತ್ನಿ. ಪಡ್ನೂರು ಗ್ರಾಮದ ರಾಮನಗರ ಎಂಬಲ್ಲಿ ಪತಿ ಹಾಗೂ ಇನ್ಫೋಸಿಸ್ ಸಾಪ್ಟ್ ವೇರ್ ಇಂಜಿನಿಯರ್ ಪುತ್ರನೊಂದಿಗೆ ವಾಸವಾಗಿದ್ದಾರೆ.
ಸನ್ಮಾನ ಕಾರ್ಯಕ್ರಮದಲ್ಲಿ ಇಸ್ಮಾಯಿಲ್ ಮುರ, ಅಯೂಭ್, ರಶೀದ್ ಮುರ, ಅಸೈನಾರ್ ಬನಾರಿ, ಅಬ್ದುಲ್ ರಹಿಮಾನ್ ಮುರ ಉಪಸ್ಥಿತರಿದ್ದರು.