ಪುತ್ತೂರು: ಕೆ.ಎಸ್.ಆರ್.ಟಿ.ಸಿ ಬಸ್ ನ ನಿರ್ವಾಹಕನೋರ್ವ ಪ್ರಯಾಣಿಕನ ಎದೆಗೆ ಕಾಲಿನಿಂದ ತುಳಿದು ರಸ್ತೆಗೆ ದೂಡಿ ಹಾಕಿದ ಕೃತ್ಯವೊಂದು ಈಶ್ವರಮಂಗಲದಲ್ಲಿ ನಡೆದಿದ್ದು, ಘಟನೆಯ ವೀಡಿಯೊ ವೈರಲ್ ಆಗ್ಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಬಸ್ ನಿರ್ವಾಹಕನನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.
ಬಸ್ ಚಾಲಕ, ನಿರ್ವಾಹಕ ಸುಖರಾಜ ರೈ ರವರನ್ನು ಕೆ. ಎಸ್. ಆರ್. ಟಿ. ಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಅಮಾನತುಗೊಳಿಸಿ ಆದೇಶವನ್ನು ಹೊರಡಿಸಿದ್ದಾರೆ.
ಬಸ್ ನಿರ್ವಾಹಕನೋರ್ವ ಬಸ್ ಹತ್ತಲು ಬಂದ ಪಾನಮತ್ತ ವ್ಯಕ್ತಿಯನ್ನು ತಡೆದು ನಂತರ ಬಸ್ ನಿಂದ ಹೊರ ದಬ್ಬಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿದೆ.