ಪುತ್ತೂರು: ತಾಲೂಕಿನ 34 ನೇ ನೆಕ್ಕಿಲಾಡಿ ಗ್ರಾಮದ ಬಿತಾಲಾಪು ನಿವಾಸಿಯಾದ ಯಮುನ ರವರು ಸಣ್ಣ ಗುಡಿಸಲಿನಲ್ಲಿ ವಾಸಿಸುತ್ತಿದ್ದು, ಪ್ರಸ್ತುತ ಮನೆ ರಚನೆಗೆ ಸರಕಾರದಿಂದ ಸಹಾಯಧನ ಮಂಜೂರಾಗಿರುತ್ತದೆ. ಬಡವರಾದ ಇವರು ಕೂಲಿ ಮಾಡಿ ಜೀವನ ನಡೆಸುತ್ತಿದ್ದು, ಸರಕಾರದಿಂದ ಮನೆ ಕಟ್ಟಲು ಸಹಾಯಧನ ಮಂಜೂರಾಗಿದ್ದರೂ ಮನೆ ರಚನೆ ಮಾಡಲು ಕೈಯಲ್ಲಿ ಹಣ ಇಲ್ಲದೆ ಹೇಗೆ ಮನೆ ರಚನೆ ಪ್ರಾರಂಭ ಮಾಡುವುದು ಎಂದು ಚಿಂತೆಯಲ್ಲಿರುವಾಗ, ಸಂದರ್ಭದಲ್ಲಿ ಸ್ಥಳೀಯ ಅಶೋಕ್ ಕುಮಾರ್ ರೈ ಅಭಿಮಾನಿ ಬಳಗದವರು ಉದ್ಯಮಿ, ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಇವರ ದರ್ಬೆಯ ಕಛೇರಿಗೆ ಬಂದು ಸಮಸ್ಯೆಯನ್ನು ಹೇಳಿಕೊಂಡಾಗ ಮನೆಗೆ ಭೇಟಿ ನೀಡುತ್ತೇನೆ ಮತ್ತು ಮನೆ ರಚನೆಗೆ ಸಹಕಾರ ನೀಡುತ್ತೇನೆ ಮತ್ತು ಮನೆಗೆ ಫೌಂಡೇಶನ್ ಹಾಕಿ ಎಂದು ಧೈರ್ಯ ತುಂಬಿದರು.

ಸೆ.11 ರಂದು ಅವರ ಮನೆಗೆ ಖುದ್ದು ಭೇಟಿ ನೀಡಿ ಅವರ ಪರಿಸ್ಥಿತಿಯನ್ನು ವೀಕ್ಷಿಸಿದರು. ಯಮುನ ರವರಿಗೆ ಮಾನಸಿಕ ಸ್ಥಿತಿ ಸರಿ ಇಲ್ಲ, ಇನ್ನೊಬ್ಬ ಮಗನ ಆರೋಗ್ಯ ಕೂಡ ಸರಿ ಇಲ್ಲ, ಮಗಳ ದುಡಿಮೆಯಿಂದ ಜೀವನ ಸಾಗಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮನೆ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಅಶೋಕ್ ಕುಮಾರ್ ರೈ ತಿಳಿಸಿರುತ್ತಾರೆ.
ಅದೇ ಪರಿಸರದ ಗೀತಾ ಎಂಬವರ ಮನೆಯ ಛಾವಣಿ ಕೂಡ ಕುಸಿದು ಬೀಳುವ ಹಂತದಲ್ಲಿದ್ದು, ಇವರ ಮನೆ ಛಾವಣಿ ದುರಸ್ಥಿ ಮಾಡುವ ಸಂದರ್ಭದಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಅದೇ ರೀತಿ ಆ ಪರಿಸರದ ಸುನೀತಾ ರವರ ಮನೆಗೂ ಭೇಟಿ ನೀಡಿ ಅವರ ಸಮಸ್ಯೆಯನ್ನು ಕೇಳಿ, ಇವರು 94 ಸಿ ಅರ್ಜಿ ನೀಡಿ 3 ವರ್ಷ ಕಳೆದರೂ ಹಕ್ಕು ಪತ್ರ ಇನ್ನೂ ಸಿಕ್ಕಿಲ್ಲ ಮನೆ ಛಾವಣಿ ಕೂಡ ಕುಸಿದು ಬೀಳುವ ಹಂತದಲ್ಲಿದೆ. ಅವರ ಮಕ್ಕಳ ಜನನ ಸರ್ಟಿಫಿಕೇಟ್ ಕೂಡ ಪಡಕೊಳ್ಳಲು ಆಗಿಲ್ಲ ಎಂದು ತಮ್ಮ ಆಳಲು ತೋಡಿಕೊಂಡರು, ತಮ್ಮ ಸಮಸ್ಯೆಗೂ ಸಹಕಾರ ನೀಡುವುದಾಗಿ ಅಶೋಕ್ ರೈ ರವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗೀತಾ ಬಿತಲಾಪು, ಯಮುನಾ ಬಿತಲಾಪು , ಕವಿತಾ ಬಿತಲಾಪು, ಸತೀಶ ಬಿತಲಾಪು, ಅಣ್ಣು ಬಿತಲಾಪು, ಸುನಿತಾ ಬಿತಲಾಪು, ಜಯಶೀಲಾ ಶೆಟ್ಟಿ ಶಾಂತಿನಗರ, ಸತ್ಯವತಿ, ಹರೀಶ್ ಪೂಂಜ ಅಲಿಮಾರ್ , ಜತೀಂದ್ರ ಶೆಟ್ಟಿ ಅಲಿಮಾರ್ , ಮಾರ್ಕೋನ್ ಟೈಲರ್ ಕೊಳಕ್ಕೆ ಉಪಸ್ಥಿತರಿದ್ದರು.

