ವಿಟ್ಲ: ಭಾರತ್ ಸ್ಕೌಟ್-ಗೈಡ್ಸ್ ನ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ವಿಟ್ಲದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಪ್ರಭಾಕರ ದಂಬೆಕಾನ ರವರು ವಹಿಸಿದ್ದರು. ಅತಿಥಿಗಳಾಗಿ ಜಿಲ್ಲಾ ಸಂಸ್ಥೆಯಿಂದ ಜಿಲ್ಲಾ ಕಾರ್ಯದರ್ಶಿಗಳಾದ ಎಂ.ಜೆ. ಕಜೆ ಯವರು ಮತ್ತು ಜಿಲ್ಲಾ ಆಯುಕ್ತರಾದ ರಾಮಶೇಷ ಶೆಟ್ಟಿ ರವರು ಆಗಮಿಸಿದ್ದರು.
ಈ ವಾರ್ಷಿಕ ಮಹಾಸಭೆಯಲ್ಲಿ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ಸುದರ್ಶನ್ ಪಡಿಯಾರ್, ಸತೀಶ್ ಆಳ್ವ, ಜೆಸಿಂತಾ ಮಸ್ಕರೇನಸ್, ವಿಟ್ಲ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಅನ್ನಪೂರ್ಣ, ಕಾರ್ಯದರ್ಶಿ ಗಳಾದ ನಾರಾಯಣ ನಾಯಕ್ ಉಪಸ್ಥಿತರಿದ್ದರು.
ತಾಲೂಕಿನ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ವಿಶ್ವನಾಥ್ ಗೌಡ ರವರನ್ನು ಸನ್ಮಾನಿಸಲಾಯಿತು. ಸ್ಥಳೀಯ ಸಂಸ್ಥೆಯ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಸ್ಕೌಟ್ ಮಾಸ್ಟರ್ ಪ್ರತೀಪ್ ಅತಿಥಿಗಳನ್ನು ಸ್ವಾಗತಿಸಿದರು.ಗೈಡ್ ಕ್ಯಾಪ್ಟನ್ ಜಯಶ್ರೀ ವಾರ್ಷಿಕ ವರದಿಯನ್ನು ವಾಚಿಸಿದರು. ಸ್ಕೌಟ್ ಮಾಸ್ಟರ್ ವಿಶ್ವನಾಥ ಗೌಡ ಕಳೆದ ಸಾಲಿನ ಲೆಕ್ಕ-ಪತ್ರ ಮಂಡಿಸಿದರು. ಸ್ಕೌಟ್ ಮಾಸ್ಟರ್ ಇಸ್ಮಾಯಿಲ್ ಧನ್ಯವಾದ ಅರ್ಪಿಸಿದರು. ಸ್ಕೌಟ್ ಮಾಸ್ಟರ್ ನಾರಾಯಣ ನಾಯಕ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.
ನೂತನ ಪದಾಧಿಕಾರಿಗಳು :
- ಕಾರ್ಯಾಧ್ಯಕ್ಷರು : ಜ್ಞಾನೇಶ್. ಶಿಕ್ಷಣಾಧಿಕಾರಿಗಳು. ಬಂಟ್ವಾಳ.
- ಗೌರವಾಧ್ಯಕ್ಷರು: ದಂಬೆಕಾನ ಪ್ರಭಾಕರಶೆಟ್ಟಿ.
- ಅಧ್ಯಕ್ಷರು : ಸುದರ್ಶನ್ ಪಡಿಯಾರ್.
- ಉಪಾಧ್ಯಕ್ಷರುಗಳು : ಸತೀಶ್ ಆಳ್ವ. ಜಯರಾಮ ಬಲ್ಲಾಳ್, ಸುರೇಶ್ ಬನಾರಿ, ಜೆಸಿಂತಾ ಮಸ್ಕರೇನಸ್, ಪುಷ್ಪ, ಶಿವಾನಿ.
- ಕಾರ್ಯದರ್ಶಿಗಳು: ಪ್ರತೀಪ್ ಎ. ಆರ್.
- ಜಂಟಿ ಕಾರ್ಯದರ್ಶಿ : ಜಯಶ್ರೀ ಜಿ.
- ಸಹ ಕಾರ್ಯದರ್ಶಿ : ಇಸ್ಮಾಯಿಲ್,
- ಕೋಶಾಧಿಕಾರಿ : ವಿಶ್ವನಾಥ್ ಗೌಡ
- ಜಿಲ್ಲಾ ಪ್ರತಿನಿಧಿ – ಸ್ಕೌಟ್ ವಿಭಾಗ : ನಾರಾಯಣ ನಾಯಕ್, ಗೈಡ್ ವಿಭಾಗ : ಎವ್ಲಿನ್ ಹೆಲೆನ್ ಪುಡ್ತಾದೋ ಆಯ್ಕೆಯಾದರು.