ವಿಟ್ಲ: ದ.ಕ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘ(ರಿ) ಮಂಗಳೂರು, ಮರಾಟಿ ಮಹಿಳಾ ವೇದಿಕೆ ಮತ್ತು ಮರಾಟಿ ಯುವ ವೇದಿಕೆ ಇದರ ಆಶ್ರಯದಲ್ಲಿ ಫಾದರ್ ಮುಲ್ಲರ್ ವೈದ್ಯಕೀಯ ಮಹಾವಿದ್ಯಾಲಯ ಮಂಗಳೂರು ಇವರ ಸಹಯೋಗದೊಂದಿಗೆ ಸೆ.18 ರಂದು ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ) ವಿಟ್ಲದಲ್ಲಿ ಸಾರ್ವಜನಿಕ ಉಚಿತ ವೈದ್ಯಕೀಯ ಶಿಬಿರ ನಡೆಯಿತು.
ವೇದಾವತಿ ಎನ್. ವಿಭಾಗೀಯ ಪ್ರಬಂಧಕರು ನ್ಯೂ ಇಂಡಿಯಾ ಕಂ.ಲಿ.ಮಂಗಳೂರು ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ. ಶ್ರೀನಿವಾಸ್ ನಾಯ್ಕ ಪಡೀಲ್ ರವರು ವಹಿಸಿದ್ದರು. ವಿಟ್ಲ ಪಂಚಾಯತ್ ನ ಮುಖ್ಯ ಅಧಿಕಾರಿ ಗೋಪಾಲ್ ನಾಯ್ಕ, ಉಪಪ್ರಾಂಶುಪಾಲರಾದ ಕಿರಣ್ ಕುಮಾರ್, ಯನ್.ಕೃಷ್ಣ ನಾಯ್ಕ ನೆಕ್ಕರೆಕಾಡು, ನವೀನ ನೆಕ್ಕರೆಕಾಡು ಉಪಸ್ಥಿತರಿದ್ದರು.
ಶಿವಾಜಿ ಮಿತ್ರಮಂಡಳಿ, ಮರಾಟಿ ಯುವ ವೇದಿಕೆ ವಿಟ್ಲ, ಸುಂದರ ನಾಯ್ಕ ಸಹಕಾರವನ್ನು ನೀಡಿದರು. ಮಹಾಲಿಂಗ ನಾಯ್ಕ, ಆಸ್ಪಿನ್‌ವಾಲ್ ಸ್ವಾಗತಿಸಿದರು. ಮಹಾಲಿಂಗ ನಾಯ್ಕ ವಂದನಾರ್ಪಣೆಗೈದರು, ವನಿತಾ ಸುಂದರ್ ನಾಯ್ಕ ಕಾರ್ಯಕ್ರಮದ ನಿರೂಪಣೆ ಮಾಡಿದರು.