ಪುತ್ತೂರು: ಹಿಂದೂ ಮುಖಂಡ, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ರವರು ಸೆ.19 ರಂದು ಪುತ್ತೂರಿಗೆ ಆಗಮಿಸಿದ್ದು, ಈ ವೇಳೆ ಪ್ರತಿಷ್ಠಿತ ಐಎಂಎ-ಕೆಎಸ್‌ಬಿ ಪ್ರಶಸ್ತಿಗೆ ಭಾಜನರಾದ ಜನಪ್ರಿಯ ವೈದ್ಯ ಡಾ.ಎಂ.ಕೆ. ಪ್ರಸಾದ್ ರವರನ್ನು ಭೇಟಿಯಾದರು.
ಸೆ.19 ರಂದು ಮಧ್ಯಾಹ್ನ ವೇಳೆ ಪುತ್ತೂರಿಗೆ ಆಗಮಿಸಿದ ಮುತಾಲಿಕ್ ರವರು ಮೊದಲಿಗೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು, ನಂತರ ಪತ್ರಿಕಾಗೋಷ್ಠಿ ನಡೆಸಿದರು. ಅನಂತರ ಪ್ರವೀಣ್ ನೆಟ್ಟಾರು ರವರ ಮನೆಗೆ ಭೇಟಿ ನೀಡಿದರು. ಬಳಿಕ ಆದರ್ಶ ಆಸ್ಪತ್ರೆಗೆ ಆಗಮಿಸಿ ಡಾ. ಎಂ.ಕೆ. ಪ್ರಸಾದ್ ಅವರನ್ನು ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಹಲವು ಮಂದಿ ಹಿಂದೂ ಮುಖಂಡರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.