ವಿಟ್ಲ: ದ್ವಿಚಕ್ರ ವಾಹನ ರಿಪೇರಿ ಗ್ಯಾರೇಜ್ ನಲ್ಲಿ ನಿಂದ ಕೆ. ಟಿ. ಎಂ ಬೈಕ್ ನ ಪಂಪ್, ಸೆನ್ಸರ್ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಕಳವುಗೈದ ಘಟನೆ ವಿಟ್ಲದ ಬೊಬ್ಬೆಕೇರಿ ಎಂಬಲ್ಲಿ ನಡೆದಿದೆ.
ಈ ಬಗ್ಗೆ ಅಂಗಡಿ ಮಾಲೀಕ ಲೋಕೇಶ್ ರವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿಟ್ಲದ ಬೊಬ್ಬೆಕೇರಿಯಲ್ಲಿ ಕಾರ್ಯಚರಿಸುತ್ತಿರುವ ಸಿದ್ಧಿವಿನಾಯಕ ದ್ವಿಚಕ್ರ ವಾಹನ ರಿಪೇರಿಯ ಗ್ಯಾರೇಜ್ ನಿಂದ ಟಿ. ಎಂ ಬೈಕ್ ನ ಪಂಪ್, ಸೆನ್ಸರ್ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಕಳವುಗೈದಿದ್ದು, ಸೆ.17 ರಂದು ರಾತ್ರಿ ಬೀಗ ಹಾಕಿ ಮನೆಗೆ ಹೋಗಿದ್ದು, ಭಾನುವಾರ ರಜೆ ಇರುವುದರಿಂದ ಕೆಲಸಕ್ಕೆ ಬಂದಿರುವುದಿಲ್ಲ. ಸೆ.19 ರಂದು ಬೆಳಗ್ಗೆ ಕೆಲಸದವರು ಬಾಗಿಲು ತೆರೆದಾಗ ಒಳಗಡೆ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು.
ಹಿಂಬದಿ ಕಿಟಕಿಯ ಪೈಬರ್ ಶೀಟ್ ಮುರಿದು ಹಾಕಲಾಗಿತ್ತು. ನಂತರ ನಾನು ಅಂಗಡಿ ಬಂದಾಗ ಅಂಗಡಿಯಲ್ಲಿ ಇಟ್ಟಿದ್ದ ಕೆ.ಟಿ.ಎಂ ಬೈಕ್ ನ ಪಂಪ್, ಸೆನ್ಸರ್, ಇನ್ನಿತರ ಸಾಮಗ್ರಿಗಳು ಕಾಣಿಯಾಗಿದ್ದು, ಸುಮಾರು ಒಟ್ಟು ರೂ. 50,000 ಮೌಲ್ಯದ ವಸ್ತುಗಳು ಕಳ್ಳತನವಾಗಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.