ಪುತ್ತೂರು: ಖಾಸಗಿ ಬಸ್‌ನಲ್ಲಿ ಪುತ್ತೂರಿಗೆ ಬರುತ್ತಿದ್ದ ಪುತ್ತೂರು ತಾಲೂಕು ಪಂಚಾಯತ್ ಯೋಜನಾಧಿಕಾರಿಯೊಬ್ಬರ ಪರ್ಸ್ ಅನ್ನು ಮಹಿಳೆಯೊಬ್ಬರು ಕಳವು ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಳವು ಪ್ರಕರಣಕ್ಕೆ ಸಂಬಂಧಿಸಿ ಯೋಜನಾಧಿಕಾರಿ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಂತೆ ಸೆ.21ರಂದು ಕಳ್ಳಿಯೂ ಮಂಗಳೂರಿನ ಪಡೀಲ್‌ನಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಪುತ್ತೂರು ತಾ.ಪಂ ಯೋಜನಾಧಿಕಾರಿ ಸುಕನ್ಯ ಅವರು ಮಂಗಳೂರಿನಿಂದ ಪುತ್ತೂರಿಗೆ ಪ್ರಯಾಣಿಸುತ್ತಿದ್ದ ವೇಳೆ ಅವರ ಪರ್ಸ್ ಕಳೆದು ಹೋಗಿತ್ತು. ಈ ಕುರಿತು ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಬಸ್‌ನಲ್ಲಿ ಮಹಿಳೆಯೊಬ್ಬರು ಅವರ ಪರ್ಸ್ ಅನ್ನು ಕಳವು ಮಾಡುವ ದೃಶ್ಯ ಬಸ್‌ನಲ್ಲಿದ್ದ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸೆ.21 ರಂದು ಕಳವು ಮಾಡಿದ ಮಹಿಳೆ ಮಂಗಳೂರು ಪಡೀಲ್‌ನಲ್ಲಿ ಪತ್ತೆಯಾಗಿರುವುದಾಗಿ ವರದಿಯಾಗಿದೆ..
