ಬಂಟ್ವಾಳ: ರಾಜ್ಯದಲ್ಲಿ ಸಂಚಲನ ಮೂಡಿಸಿದ ಬೆಂಗಳೂರು ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬೊಳಂತೂರು ನಿವಾಸಿಯೋರ್ವನನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆಯ ದೃಷ್ಟಿಯಿಂದ ಬೆಂಗಳೂರು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಬೋಳಂತೂರು ನಿವಾಸಿ ಮಹಮ್ಮದ್ ಕುಟ್ಟಿ ಎಂಬವರ ಪುತ್ರ ಮಹಮ್ಮದ್ ತಪ್ಸೀರ್ ಎಂಬಾತನ್ನು ಪೊಲೀಸರು ದೀರ್ಘಕಾಲದ ವಿಚಾರಣೆ ಬಳಿಕ ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಟ್ವಾಳ ತಾಲೂಕಿನ ಬೊಳಂತೂರು ನಿವಾಸಿ ಮಹಮ್ಮದ್ ತಪ್ಸೀರ್ ಎಂಬಾತನನ್ನು ಬಂಟ್ವಾಳ , ವಿಟ್ಲ ಪೊಲೀಸರು ಇಂದು ಸುಮಾರು 11.35 ರ ವೇಳೆ ವಶಕ್ಕೆ ಪಡೆದುಕೊಂಡು ಬಂಟ್ವಾಳಕ್ಕೆ ಕರೆತಂದಿದ್ದಾರೆ. ಆ ಬಳಿಕ ರಾಜ್ಯ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಳೆದ ವರ್ಷ ಬೆಂಗಳೂರಿನ ಕೆ.ಜೆ.ಡಿ.ಜೆ.ಹಳ್ಳಿಯಲ್ಲಿ ಅಖಂಡ ಶ್ರೀನಿವಾಸ ಅವರ ಮನೆಗೆ ದಾಂಧಲೆ ನಡೆಸಿ ಆ ಬಳಿಕ ಪೊಲೀಸ್ ಠಾಣೆಗೆ ನುಗ್ಗಿಲು ಪ್ರಯತ್ನಿಸಿ ಸಾಕಷ್ಟು ಹಾನಿ ಉಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಪೊಲೀಸರ ತಂಡ ತನಿಖೆ ನಡೆಸುತ್ತಿತ್ತು.ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಮ್ಮದ್ ತಪ್ಸೀರ್ ಕೂಡ ಭಾಗಿಯಾಗಿದ್ದ ಎಂಬ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗಿದೆ.
ಕೆ.ಜೆ.ಹಳ್ಳಿ ಡಿ.ಜೆ ಹಳ್ಳಿ ಪ್ರಕರಣಕ್ಕೆ ಆರಂಭದಲ್ಲಿ ಯೋಜನೆ ರೂಪಿಸಿದ ತಂಡದ ಜೊತೆಗೆ ಈತ ನಿರಂತರವಾಗಿ ಸಂಪರ್ಕವನ್ನು ಇರಿಸಿಕೊಂಡಿದ್ದ ಎಂಬ ಆರೋಪದಲ್ಲಿ ಈತನ ಮನೆಗೆ ದಾಳಿ ನಡೆಸಲಾಗಿದೆ.
ತಪ್ಸೀರ್ ಪಿ.ಎಫ್.ಐ.ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದ ಈತ ಇತ್ತೀಚಿನ ದಿನಗಳಲ್ಲಿ ಪ್ರಮುಖವಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುತಿಸಿ ಕೊಂಡಿದ್ದ ಎನ್ನಲಾಗಿದೆ. ಪ್ರಸ್ತುತ ಈತ ಉದ್ಯಮ ನಡೆಸುತ್ತಿದ್ದು, ಬೋಳಂತರಿನಲ್ಲಿ ವಾಸವಾಗಿದ್ದ.
ಬಂಟ್ವಾಳ ಹಾಗೂ ವಿಟ್ಲ ಪೋಲಿಸರ ತಂಡ ಮುಂಜಾನೆ ಮೂರು ಗಂಟೆಗೆ ರಾಜ್ಯದ ಪೊಲೀಸರು ನೀಡಿದ ವಿಳಾಸದಂತೆ ಬಂಟ್ವಾಳ ತಾಲೂಕಿನ ಅಮ್ಟೂರು ಗ್ರಾಮದಲ್ಲಿರುವ ಈತನ ದೊಡ್ಡಪ್ಪ ನ ಮನೆಗೆ ಈತನ ಮನೆ ಎಂದು ತಪ್ಪಾಗಿ ಗ್ರಹಿಸಿ ಮನೆಗೆ ಹೋದಾಗ ಇಲ್ಲಿ ಈತ ಇಲ್ಲ ಬೊಳಂತೂರಿನಲ್ಲಿ ವಾಸವಾಗಿದ್ದಾನೆ. ಆದರೆ ಈತನ ವಿಳಾಸ ಮಾತ್ರ ದೊಡ್ಡಪ್ಪನ ಮನೆಯದ್ದು ನೀಡಿದ್ದ ಎಂಬುದು ಗೊತ್ತಾದ ಬಳಿಕ ರೈಡ್ ಮಾಡಲಾಯಿತು.
ಅಗತ್ಯ ದಾಖಲೆಗಳ ಸಹಿತ ಆರೋಪಿ ಮೊಬೈಲ್ ಜೊತೆ ಮನೆಯವರ ಮೊಬೈಲ್ ಗಳನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ರಾಜ್ಯ ಪೊಲೀಸ್ ಇಲಾಖೆ ನಿರ್ದೇಶನದಂತೆ, ಬಂಟ್ವಾಳ ಡಿವೈಎಸ್ಪಿ ಪ್ರತಾಪ್ ಸಿಂಗ್ ಥೋರಾಟ್ ಅವರ ಮಾರ್ಗದರ್ಶನದಲ್ಲಿ, ವಿಟ್ಲ ಇನ್ಸ್ ಪೆಕ್ಟರ್ ನಾಗರಾಜ್ ಎಚ್, ಬಂಟ್ವಾಳ ನಗರ ಠಾಣಾ ಪೊಲೀಸ್ಇನ್ಸ್ ಪೆಕ್ಟರ್ ವಿವೇಕಾನಂದ, ಗ್ರಾಮಾಂತರ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್.ಪಿ ಎಸ್.ಐ.ಗಳಾದ ಅವಿನಾಶ್, ಹರೀಶ್, ಕಲೈಮಾರ್, ಸಂದೀಪ್, ಹಾಗೂ ಸಿಬ್ಬಂದಿ ವರ್ಗ, ಕೆ.ಎಸ್.ಆರ್‌ಪಿ ಪೊಲೀಸರ ತಂಡ ಕಾರ್ಯಚರಣೆ ನಡೆಸಿತ್ತು.