ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಶನ್ (ರಿ.) ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆ ಇದರ 32ನೇ ವಾರ್ಷಿಕ ಮಹಾಸಭೆ ಮಂಗಳೂರು ಪುರಭವನದಲ್ಲಿ ನಡೆದಿದ್ದು, 14 ವಲಯಗಳಿಗೆ ವಾರ್ಷಿಕ ವರದಿಗೆ ಮಾಡಿರುವ ಕಾರ್ಯಕ್ರಮಕ್ಕೆ ಅತ್ಯುತ್ತಮ ವಲಯ ಪ್ರಶಸ್ತಿಯಲ್ಲಿ ಪುತ್ತೂರು ವಲಯಕ್ಕೆ ತೃತೀಯ ಬಹುಮಾನ ಲಭಿಸಿದೆ.

ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಶನ್ ನ ಪುತ್ತೂರು ವಲಯ ಅಧ್ಯಕ್ಷರಾದ ನಾಗೇಶ್ ಟಿ.ಎಸ್ ಕೆಮ್ಮಾಯಿ ರವರು ಪ್ರಶಸ್ತಿ ಸ್ವೀಕರಿಸಿದರು. ಜಿಲ್ಲಾಧ್ಯಕ್ಷರಾದ ಆನಂದ ಎನ್ ಬಂಟ್ವಾಳ ಪ್ರಶಸ್ತಿ ನೀಡಿ ಗೌರವಿಸಿದರು.

ಜಿಲ್ಲಾ ಕಾರ್ಯದರ್ಶಿ ನಿತಿನ್, ಕಾರ್ಯದರ್ಶಿ ಪ್ರಮೋದ್ ಸಾಲ್ಯಾನ್ ಗೌರವಾಧ್ಯಕ್ಷ ಹರೀಶ್ ಪುಣಚ, ಕೋಶಾಧಿಕಾರಿ ಗಿರಿಧರ ಭಟ್, ಸುದರ್ಶನ್ ರಾವ್, ಸುಧಾಕರ ಶೆಟ್ಟಿ ಮಿತ್ತೂರು ಹಾಗೂ ಪುತ್ತೂರು ವಲಯದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ರಕ್ತದಾನ ಶಿಬಿರ, ಪ್ರಜ್ಞಾ ವಿಶೇಷ ಮಕ್ಕಳ ಕೇಂದ್ರಕ್ಕೆ ನೆರವು, ಛಾಯಾಗ್ರಾಹಕರಿಗೆ ಜಿಲ್ಲಾ ಮಟ್ಟದ ಕಿರುಚಿತ್ರ ಸ್ಪರ್ಧೆ, ಕೆಸರುಗದ್ದೆ ಕ್ರೀಡಾಕೂಟ, ಛಾಯಾಗ್ರಾಹಕರಿಗೆ ತರಬೇತಿ ಶಿಬಿರ, ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸದಸ್ಯರಿಗೆ ತುರ್ತು ಚಿಕಿತ್ಸಾ ಖರ್ಚಿಗೆ ಧನ ಸಹಾಯ, ತ್ರಿವರ್ಣ ಧ್ವಜ ವಿತರಣೆ, ರಕ್ಷಾ ಬಂಧನ ಕಾರ್ಯಕ್ರಮ ಹೀಗೆ ಈ ವರ್ಷ ಹಲವಾರು ಯಶಸ್ವಿ ಕಾರ್ಯಕ್ರಮದ ಆಯೋಜನೆಗಾಗಿ ವಲಯ ಪ್ರಶಸ್ತಿ ಲಭಿಸಿದೆ..
