ಪುತ್ತೂರು: 5ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಕಲ್ಲೇಗ ಟೈಗರ್ಸ್ ವತಿಯಿಂದ ನವರಾತ್ರಿಯ ವಿಶೇಷವಾಗಿ ಅಕ್ಟೋಬರ್ 1 ರಂದು ‘ಪಿಲಿಗೊಬ್ಬು’ ನಡೆಯಲಿದ್ದು, ಈ ವಿಶೇಷ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳು ಆಗಮಿಸುತ್ತಿದ್ದಾರೆ.
ತುಳು ಚಿತ್ರರಂಗದ ಖ್ಯಾತ ಕಲಾವಿದ, ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್, ಸಮಾಜ ಕಲ್ಯಾಣ ಇಲಾಖೆಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ ಚಿಲ್ತಡ್ಕ, ಕನ್ನಡ ಚಲನಚಿತ್ರ ಖಳನಟ ವಿಕ್ರಾಂತ್ ರೋಣಾ ಖ್ಯಾತಿಯ ವಜ್ರಾಧೀರ್ ಜೈನ್ ರವರು ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದು, ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಲಿದ್ದಾರೆ.
ಅಕ್ಟೋಬರ್ 01 ರಂದು ಕಲ್ಲೇಗ ಟೈಗರ್ಸ್ ವತಿಯಿಂದ ಪುತ್ತೂರಿನ ಇತಿಹಾಸದಲ್ಲೇ ಪ್ರಪ್ರಥಮ ಭಾರಿಗೆ, ಸುಮಾರು 60 ಹುಲಿಗಳು ಬಣ್ಣ ಹಚ್ಚಿ ತಾಸೆಯ ಪೆಟ್ಟಿಗೆ ಕುಣಿದು ಎಲ್ಲರನ್ನೂ ರಂಜಿಸಲಿದೆ.