ಉಪ್ಪಿನಂಗಡಿ: ತನಗೆ ಹಲ್ಲೆಗೈದು ದರೋಡೆ ನಡೆಸಿ ಅವಾಚ್ಯ
ಶಬ್ದಗಳಿಂದ ಬೈದು ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೋರ್ವರು ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಇಚ್ಲಂಪಾಡಿ ಗ್ರಾಮದ ಅಲಂಗ ನಿವಾಸಿ ಜೋಯಿ ವಿ.ಡಿ.ಎಂಬವರು ನೀಡಿದ ದೂರಿನ ಮೇರೆಗೆ ನವನೀತ್, ರಾಹುಲ್ ಹಾಗೂ ಸುಜಿತ್
ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಅ.4 ರಂದು ರಾತ್ರಿ ವೇಳೆ ಅಂತ್ಯಸಂಸ್ಕಾರ ಕಾರ್ಯವೊಂದರ ನಿಮಿತ್ತ ಅಡ್ಡಹೊಳೆ ಚಚ್ರ್ನಲ್ಲಿದ್ದ ಸಂದರ್ಭ ಅಲ್ಲಿಗೆ ಬಂದ ಪರಿಚಯದ ನವನೀತ್ ಎಂಬಾತ ಶಿರಾಡಿವರೆಗೆ ತನ್ನನ್ನು ಸ್ಕೂಟರಲ್ಲಿ ಬಿಡುವಂತೆ ಹೇಳಿದ್ದು, ಅದರಂತೆ ಸ್ಕೂಟರಲ್ಲಿ ಹೋಗುತ್ತಿದ್ದ ವೇಳೆ ಶಿರಾಡಿ ಗ್ರಾಮದ ಪುಲ್ಲೊಟು ಎಂಬಲ್ಲಿಗೆ ತಲುಪಿದಾಗ ನವನೀತ್ ಸ್ಕೂಟರ್ ನಿಲ್ಲಿಸುವಂತೆ ಹೇಳಿದರು. ಸ್ಕೂಟರ್ ನಿಲ್ಲಿಸಿದಾಗ ಅಲ್ಲೇ ಪಕ್ಕದಲ್ಲಿ ಆಟೋ ರಿಕ್ಷಾವೊಂದು ನಿಂತಿದ್ದು, ರಿಕ್ಷಾದಲ್ಲಿದ್ದ ರಾಹುಲ್ ಹಾಗೂ ಸುಜಿತ್ ಎಂಬವರು ಇಳಿದು ಬಂದು ಬಳಿಕ ಮೂವರೂ ಸೇರಿಕೊಂಡು ನನಗೆ
ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಕೊಲೆಯತ್ನ ಮಾಡಿ, ಅವಾಚ್ಯ
ಶಬ್ದಗಳಿಂದ ಬೈದು ಮೊಬೈಲ್ ಹಾಗೂ ಹಣವನ್ನು ದರೋಡೆ
ಮಾಡಿದ್ದಾರೆ ಎಂದು ಜೋಯಿ ರವರು ಆರೋಪಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಕಲಂ 323, 324, 427, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

























