ಬಂಟ್ವಾಳ: ಕಂದಾಯ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಮರಳು ಅಡ್ಡೆಗೆ ದಾಳಿ ನಡೆಸಿ ಸುಮಾರು 100 ಮೆಟ್ರಿಕ್ ಟನ್ ಅಕ್ರಮ ಮರಳು ದಾಸ್ತಾನಿರಿಸಿದ್ದನ್ನು ವಶಪಡಿಸಿಕೊಂಡ ಘಟನೆ ಬಂಟ್ವಾಳ ತಾಲೂಕಿನ ದೇವರಪಾಲ್ ಪುದುವಿನಲ್ಲಿ ನಡೆದಿದೆ.

ಮರಳು ದಾಸ್ತಾನು ಇಟ್ಟಿದ್ದ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ದೋಣಿ, ತುಂಬಿಸಿಟ್ಟ 2 ಲೋಡ್ ಮರಳು ಹಾಗೂ ಇದಕ್ಕೆ ಸಂಬಂಧಪಟ್ಟ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ 100 ಮೆಟ್ರಿಕ್ ಟನ್ ಮರಳು ಮುಟ್ಟುಗೋಲು ಹಾಕಲಾಗಿದೆ ಎಂದು ತಿಳಿದು ಬಂದಿದೆ.


























