ಪುತ್ತೂರು: ಬಿ.ಸಿ.ರೋಡ್ ನಿಂದ ಪುತ್ತೂರಿಗೆ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಗೆ ಬೈಕ್ ಡಿಕ್ಕಿ ಹೊಡೆದ ಘಟನೆ ಕಬಕ-ಮಿತ್ತೂರು ನಡುವಿನ ಕೂವೆತ್ತಿಲ ತಿರುವಿನಲ್ಲಿ ನಡೆದಿದೆ.

ಘಟನೆಯಿಂದಾಗಿ ಬೈಕ್ ಬಸ್ಸಿನ ಮುಂಭಾಗದಲ್ಲಿ ಅಡಿಭಾಗಕ್ಕೆ ನುಸುಳಿ ಸಿಲುಕಿಕೊಂಡಿದ್ದು, ಬೈಕ್ ಸವಾರ ಕೂವೆತ್ತಿಲ ನಿವಾಸಿ ಟ್ಯಾಂಕರ್ ಚಾಲಕ ಜಗ್ಗ ಯಾನೆ ಜಗದೀಶ್ ಗೌಡ(28) ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ.
ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.


























