ಪುತ್ತೂರು: ಈಶ್ವರಮಂಗಲದ ಹೃದಯ ಭಾಗದಲ್ಲಿರುವ ಮೇಜರ್ ಸಂದೀಪ್ ಉನ್ನಿಕೃಷ್ಣನ್ ವೃತ್ತದಲ್ಲಿ ದೇಶಕ್ಕಾಗಿ ಮಡಿದ ಸೈನಿಕನ ಹೆಸರೇ ಕಾಣದಂತೆ ಹಸಿರು ಬಟ್ಟೆ ಮುಚ್ಚಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಈ ಬಗ್ಗೆ ವರದಿ ಪ್ರಕಟಿಸಿದ ಬೆನ್ನಲ್ಲೇ ಪೊಲೀಸರ ಸಮ್ಮುಖದಲ್ಲಿ ತೆರವುಗೊಳಿಸಲಾಯಿತು.

ದೇಶಕ್ಕಾಗಿ ಮಡಿದ ಸೈನಿಕನ ಹೆಸರೇ ಕಾಣದಂತೆ ಹಸಿರು ಬಟ್ಟೆ ಮುಚ್ಚಿರುವುದು ಸೈನ್ಯಕ್ಕೆ ಮತ್ತು ಸಂದೀಪ್ ಉನ್ನಿಕೃಷ್ಣನ್ ಅವರಿಗೆ ಮಾಡಿರುವ ಅಪಮಾನ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿತ್ತು., ಈ ಹಿನ್ನೆಲೆ ವೃತ್ತದ ಸುತ್ತ ಹಾಕಲಾಗಿದ್ದ ಹಸಿರು ಬಟ್ಟೆಯನ್ನು ತೆರವುಗೊಳಿಸಿದರು..




























