ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ) ಬಂಟ್ವಾಳ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಇದರ ವತಿಯಿಂದ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ನವ ಜೀವನ ಸದಸ್ಯರ ಸಮಾವೇಶ ಹಾಗೂ ಕೇಂದ್ರ ಒಕ್ಕೂಟಗಳ ಪದಗ್ರಹಣ ಸಮಾರಂಭ ಅ.9 ಆದಿತ್ಯವಾರ ಬೆಳಿಗ್ಗೆ ಸ್ಪರ್ಶ ಕಲಾಮಂದಿರ ಬಿಸಿ ರೋಡ್ ನಲ್ಲಿ ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ರೊನಾಲ್ಡ್ ಡಿಸೋಜ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ರವರು ನೆರವೇರಿಸಲಿದ್ದು, ನವ ಜೀವನ ಸದಸ್ಯರಿಗೆ ಅಭಿನಂದನೆಯನ್ನು ಮಾಜಿ ಸಚಿವರಾದ ರಮನಾಥ ರೈ ನೆರವೇರಿಸಲಿದ್ದಾರೆ.
ಕೇಂದ್ರ ಒಕ್ಕೂಟಗಳ ಜವಾಬ್ದಾರಿ ಹಸ್ತಾಂತರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲೆ ಒಂದರ ನಿರ್ದೇಶಕರಾದ ಸತೀಶ್ ಶೆಟ್ಟಿ ನೆರವೇರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಎಸಿ ಭಂಡಾರಿ, ರುಕ್ಮಯ ಪೂಜಾರಿ, ಕೆಯ್ಯೂರು ನಾರಾಯಣ ಭಟ್, ಕಿರಣ್ ಹೆಗ್ಡೆ, ಪ್ರಕಾಶ್ ಕಾರಂತ್ ನರಿ ಕೊಂಬು,ಬಾಲಕೃಷ್ಣ ಆಳ್ವ, ಕೃಷ್ಣಕುಮಾರ್ ಪೂಂಜ,ಪ್ರೊಫೆಸರ್ ತುಕಾರಾಮ್ ಪೂಜಾರಿ,ಮಾಧವ ವಳವೊರು,ಕೃಷ್ಣಪ್ಪ ಪೂಜಾರಿ ಅಲ್ಲಿಪಾದೆ, ಚಂದಪ್ಪ ಮೂಲ್ಯ, ಸದಾನಂದ ನಾವುರ, ಚಿದಾನಂದ ರೈ ಕಕ್ಯ, ಯೋಜನಾಧಿಕಾರಿಗಳಾದ ಜಯಾನಂದ ಪಿ, ಹಾಗೂ ಚೆನ್ನಪ್ಪ ಗೌಡ, ಮೊದಲಾದವರು ಉಪಸ್ಥಿತರಿರಲಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



























