ಪುತ್ತೂರು: ಈಶ್ವರಮಂಗಲದ ಹೃದಯ ಭಾಗದಲ್ಲಿರುವ ಮೇಜರ್ ಸಂದೀಪ್ ಉನ್ನಿಕೃಷ್ಣನ್ ವೃತ್ತಕ್ಕೆ ಹಸಿರು ಹೊದಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಈಶ್ವರಮಂಗಲ ಮೀಲಾದ್ ಸಮಿತಿ ಸ್ಪಷ್ಟೀಕರಣ ನೀಡಿದೆ.
ಮೀಲಾದ್ ಕಮಿಟಿ ಈಶ್ವರಮಂಗಲ ವತಿಯಿಂದ ಈದ್ ಮಿಲಾದ್ ಪ್ರಯುಕ್ತ ಪೇಟೆಯನ್ನು ಅಲಂಕರಿಸುವಾಗ ಮೆ.ಸಂದೀಪ್ ಉನ್ನಿಕೃಷ್ಣನ್ ವೃತ್ತದಲ್ಲಿ ಅವರ ಹೆಸರು ಕಾಣಿಸದ ರೀತಿಯಲ್ಲಿ ಅಚಾತುರ್ಯದಿಂದ ಹಸಿರು ಬಟ್ಟೆ ಕಟ್ಟಲಾಗಿತ್ತು. ಆದರೇ ಇದು ಗಮನಕ್ಕೆ ಬಂದ ಕೂಡಲೇ ಅದನ್ನು ತೆರವುಗೊಳಿಸಿದ್ದೇವೆ.
ಸೈನಿಕರ ಮೇಲೆ ಬಹಳಷ್ಟು ಗೌರವವಿದೆ. ಯಾವತ್ತೂ ಉದ್ದೇಶಪೂರ್ವಕವಾಗಿ ಸೈನಿಕರಿಗೆ ಅವಮಾನ ಮಾಡಲಾರೆವು. ಎಡವಟ್ಟನ್ನು ತಕ್ಷಣವೇ ತಿದ್ದಿಕೊಂಡಿದ್ದು, ಈಶ್ವರಮಂಗಲ ಪೇಟೆಗೆ ಬಂದು ಪರಿಶೀಲಿಸಿದರೆ ಮನದಟ್ಟಾಗಬಹುದು. ಅದರ ಹೊರತು ಇಲ್ಲಿ ಇನ್ಯಾವುದೇ ದುರುದ್ದೇಶವಿರಲಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ..



























