ಮಂಗಳೂರು: ಇತ್ತೀಚೆಗೆ ದೇಶದಲ್ಲಿ 5ಜಿ ಸೇವೆಗೆ ಚಾಲನೆ ನೀಡಲಾಗಿದ್ದು, ಇದನ್ನೇ ಮುಂದಿಟ್ಟುಕೊಂಡು ವಂಚಕರು ಸಾರ್ವಜನಿಕರಿಂದ ಹಣ ದೋಚುವ ಸಾಧ್ಯತೆ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಜಿಯೋ, ಏರ್‌ಟೆಲ್ ಮತ್ತು ವೋಡಾಫೋನ್ ಕಂಪೆನಿಗಳ 5ಜಿ ಸೇವೆ ಆರಂಭವಾಗಿದೆ. ಈ ಸೇವೆ ಮುಂದಿನ ದಿನಗಳಲ್ಲಿ ದೇಶದಾದ್ಯಂತ ಲಭ್ಯವಾಗಲಿದೆ. ಇದನ್ನೇ ಅಸ್ತ್ರವಾಗಿಸಿ ಸೈಬರ್ ವಂಚಕರು ಮೋಸ ಮಾಡುವ ಸಾಧ್ಯತೆ ಇದೆ.
ತಮ್ಮನ್ನು ಏರ್‌ಟೆಲ್, ವೋಡಾಫೋನ್ ಮೊದಲಾದ ಕಂಪೆನಿಯವರೆಂದು ಪರಿಚಯಿಸಿಕೊಂಡು ಸಾರ್ವಜನಿಕರಿಗೆ ಕರೆ ಮಾಡಿ “ನಿಮ್ಮ ಸಿಮ್ ಅನ್ನು 4ಜಿಯಿಂದ 5ಜಿಗೆ ಅಪ್‌ಡೇಟ್ ಮಾಡುತ್ತೇವೆ’ ಎಂದು ಹೇಳಿ ಒಟಿಪಿ ಪಡೆದು ಅಥವಾ ಲಿಂಕ್ ಕಳುಹಿಸಿ ಅದರ ಮೂಲಕ ಹಣ ದೋಚುವ ಸಾಧ್ಯತೆ ಇದೆ. ಹಾಗಾಗಿ ಯಾವುದೇ ಕಾರಣಕ್ಕೂ ಒಟಿಪಿ ನೀಡಬಾರದು ಮತ್ತು ಲಿಂಕ್‌ಗಳನ್ನು ಒತ್ತಬಾರದು ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


























